ಜ.08ರಂದು ಮಾದಾಪುರದಲ್ಲಿ ಬಡಹೆಣ್ಣು ಮಕ್ಕಳ ನಿಖಾಹ್ ಕಾರ್ಯಕ್ರಮ

Jan 2, 2026 - 14:43
Jan 2, 2026 - 14:44
 0  435
ಜ.08ರಂದು ಮಾದಾಪುರದಲ್ಲಿ  ಬಡಹೆಣ್ಣು ಮಕ್ಕಳ ನಿಖಾಹ್ ಕಾರ್ಯಕ್ರಮ

ಮಡಿಕೇರಿ: ಮಾದಾಪುರದ ಮೊಹಿಯ್ಯದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ಗೌಸಿಯ ಸ್ವಲಾತ್ ಕಮಿಟಿಯ 32ನೇ ವಾರ್ಷಿಕೋತ್ಸವ ಪ್ರಯುಕ್ತ ಬಡ ಹೆಣ್ಣುಮಗಳ ನಿಖಾಹ್ ಕಾರ್ಯಕ್ರಮ ಜ.8 ರಂದು ಮಾದಾಪುರದಲ್ಲಿ ನಡೆಯಲಿದೆ ಎಂದು ಗೌಸಿಯ ಸ್ವಲಾತ್ ಕಮಿಟಿಯ ಅಧ್ಯಕ್ಷ ಎಂ.ಉಮ್ಮರ್ ತಿಳಿಸಿದ್ದಾರೆ.

ಕಮಿಟಿಯ 32ನೇ ವಾರ್ಷಿಕೋತ್ಸವ ಪ್ರಯುಕ್ತ ಜ.7ರಂದು ತನ್ನ ಅಧ್ಯಕ್ಷತೆಯಲ್ಲಿ ಸಂಜೆ 6.30 ಗಂಟೆಗೆ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮೊಹಿಯ್ಯದ್ದೀನ್ ಜುಮಾ ಮಸೀದಿ ಖತೀಬರಾದ ಮೊಹಮ್ಮದ್ ಶಾಫಿ ಸಖಾಫಿ ನೆರವೇರಿಸಲಿದ್ದಾರೆ. ಸಂಜೆ 7 ಗಂಟೆಗೆ ಸಮೀರ್ ದಾರಿಮಿ ಕೊಲ್ಲಂರವರಿAದ ಧಾರ್ಮಿಕ ಪ್ರಭಾಷಣ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರವಾದಿವರ್ಯರ್ ಕುಡಿ ಬಾಯಾರ್ ತಂಙಳ್ ನೇತೃತ್ವದಲ್ಲಿ ಜ.8ರಂದು ಸಂಜೆ 6ಗಂಟೆಗೆ ಬಡ ಹೆಣ್ಣುಮಗಳ ನಿಖಾಹ್ ಕಾರ್ಯಕ್ರಮ ನಡೆಯಲಿದ್ದು, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಪ್ರಮುಖರಾದ ಹನೀಫ್, ಎ.ಪಿ.ಅಕ್ಬರ್, ಹಂಸಕೊಟ್ಟಮುಡಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯ ಪ್ರಮುಖರಾದ ನಾಜ್ಹೀಮ್, ಎಸ್.ಅಬ್ದುಲ್ ನಾಸಿರ್, ಎಂ.ಎ.ಅಬ್ದುಲ್ಲ, ಸಂಶುದ್ದೀನ್, ಸಮ್ಮಾನ್ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0