ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದ್ಯಸರ ಸಂಖ್ಯೆ ನಿಗದಿ:ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನ ; 102 ಗ್ರಾ.ಪಂ‌ ಗಳಲ್ಲಿ ಒಟ್ಟು‌ 1200 ಸದಸ್ಯರು

Apr 23, 2026 - 10:56
 0  235
ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದ್ಯಸರ ಸಂಖ್ಯೆ ನಿಗದಿ:ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನ ; 102 ಗ್ರಾ.ಪಂ‌ ಗಳಲ್ಲಿ ಒಟ್ಟು‌ 1200 ಸದಸ್ಯರು

(ಕೆ.ಎಂ ಇಸ್ಮಾಯಿಲ್ ಕಂಡಕರೆ)

 ಮಡಿಕೇರಿ:ಕರ್ನಾಟಕ ಸರ್ಕಾರದ ಕರ್ನಾಟಕ ಪಂಚಾಯತ್ ರಾಜ್ ಸೀಮಾ ಗಡಿ ನಿರ್ಣಯ ಆಯೋಗವು, ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಪಡಿಸಿ ಏಪ್ರಿಲ್ 18ರಂದು ಆದೇಶಿಸಿದ್ದು,ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನವಾಗಿದೆ.

ಅವಧಿ ಮುಗಿದ ರಾಜ್ಯದ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ‌ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿ‌ಮ‌ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಮಾರ್ಚ್ 23ರಂದು ನಡೆದಿತ್ತು.

 ಸದ್ಯ ಚಾಲ್ತಿಯಲ್ಲಿರುವ ಹಿಂದಿನ ಜನಗಣತಿ ಆಧರಿಸಿ ಪ್ರತಿ ಗ್ರಾ.ಪಂ.ಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ಕರ್ನಾಟಕ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡಬೇಕು. ಅದರಂತೆ, ಅಗತ್ಯ ಅಂಕಿ-ಸಂಖ್ಯೆಗಳ ಮಾಹಿತಿಯನ್ನು 15 ದಿನಗಳಲ್ಲಿ ಆಯೋಗಕ್ಕೆ ಒಗದಿಸುವಂತೆ ಮಾರ್ಚ್ 18ರಂದು ಕ್ಷೇತ್ರ ಮರುವಿಂಗಡಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಮಾರ್ಚ್ 23ರಂದು ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವಕೇಟ್ ಜನರ್ ಹೈ ಕೋರ್ಟ್ ಗೆ ಲಿಖಿತ ಮಾಹಿತಿ ನೀಡಿತ್ತು. ಇದೀಗ ಸೀಮಾ ಗಡಿ ನಿರ್ಣಯ ಆಯೋಗ ರಾಜ್ಯದ ಗ್ರಾ.ಪಂ ಸದಸ್ಯರ ಸಂಖ್ಯೆ ನಿಗದಿ ಪಡಿಸಿ ಆದೇಶ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ತಾಲ್ಲೂಕಿನ 26 ಗ್ರಾ.ಪಂ‌ಗಳಲ್ಲಿ 295,ಸೋಮವಾರಪೇಟೆ 23 ಗ್ರಾ.ಪಂಗಳಲ್ಲಿ 254, ವಿರಾಜಪೇಟೆ 17 ಗ್ರಾ.ಪಂ ಗಳಲ್ಲಿ 205,ಕುಶಾಲನಗರ ‌16 ಗ್ರಾ.ಪಂ ಗಳಲ್ಲಿ 203 ಹಾಗೂ ಪೊನ್ನಂಪೇಟೆ ತಾಲ್ಲೂಕಿನ 20 ಗ್ರಾ.ಪಂ‌ ಗಳಲ್ಲಿ 243 ಸದಸ್ಯ ಸ್ಥಾನಗಳನ್ನು ನಿಗದಿ ಪಡಿಸಲಾಗಿದೆ. ಜಿಲ್ಲೆಯ ‌102 ಗ್ರಾಮ ಪಂಚಾಯಿತಿಗಳಲ್ಲಿ ‌ಒಟ್ಟು 1200 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ,ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ.ಆಕ್ಷೇಪಣೆಯ ನಂತರ ಜಿಲ್ಲೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಾ ಅಥವಾ ಹೆಚ್ಚಳವಾಗುತ್ತಾ ಎಂಬದು ಕಾದುನೋಡಬೇಕಾಗಿದೆ.

ಸದಸ್ಯರ ಸಂಖ್ಯೆ ಅಂತಿಮಗೊಂಡ ಬಳಿಕ ಮೀಸಲಾತಿ ನಿಗದಿಪಡಿಸಲು ಕನಿಷ್ಠ ಮೂರು ತಿಂಗಳು ಕಾಲಾವಕಾಶಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾರ್ಚ್ 23ರಂದು ವಾದ ಮಂಡಿಸಿದ್ದರು. ಇದೀಗ ಸೀಮಾ ಗಡಿ ನಿರ್ಣಯ ಆಯೋಗವು‌ ಸದಸ್ಯರ ಸಂಖ್ಯೆ ನಿಗದಿಪಡಿಸಿ ಆದೇಶ ನೀಡಿದ್ದು,ಮೂರು ತಿಂಗಳೊಳಗೆ ವಾರ್ಡ್ ವಾರು‌ ಮೀಸಲಾತಿ ಪ್ರಕಟಿಸುವ ಸಾಧ್ಯತೆ‌ ಇದೆ.

 ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ, ದಿನಾಂಕ:24-04-2026ರ ಒಳಗಾಗಿ ಸಲ್ಲಿಸಲ್ಪಟ್ಟ ಆಕ್ಷೇಪಣೆ/ಅಹವಾಲುಗಳ ಪರಿಶೀಲನಾ ಅದಾಲತ್ ಅನ್ನು ದಿನಾಂಕ:27-04-2026 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್-ನಂ-2, 2ನೇ ಮಹಡಿ, ಕೊಠಡಿ ಸಂಖ್ಯೆ:229, 230 ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇಲ್ಲಿ ನಡೆಸಲಾಗುವುದು. ಆಕ್ಷೇಪಣೆ ಮತ್ತು ಅಹವಾಲುಗಳನ್ನು ಸಲ್ಲಿಸಿರುವವರು ಅದಾಲತ್ ನಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ, ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ತಮ್ಮೊಂದಿಗೆ ಕಡ್ಡಾಯವಾಗಿ ತರತಕ್ಕದ್ದು ಎಂದು ಸೀಮಾ ಗಡಿ ನಿರ್ಣಯ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದೆ. rdpr.Karnataka.gov.in\rdc\ public ವೆಬ್ ಸೈಟ್ ‌ನಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 

 ಸೀಮಾ ಗಡಿ ನಿರ್ಣಯ ಆಯೋಗ ಪ್ರಕಟಿಸಿರುವ ಜಿಲ್ಲೆಯ ಗ್ರಾ.ಪಂಗಳ ಸದಸ್ಯರ ಸಂಖ್ಯೆ;

ಮಡಿಕೇರಿ ತಾಲ್ಲೂಕು; ಮಕ್ಕಂದೂರು 7, ಗಾಳಿಬೀಡು 10, ಕಳಕೇರಿ ನಿಡುಗಣೆ 10,ಕಡಗದಾಳು 11,ಮರಗೋಡು 10,ಹೊಸ್ಕೇರಿ‌ 09, ಕಾಂತೂರು ಮೂರ್ನಾಡು 21,ಹೊದ್ದೂರು 15, ಹಾಕತ್ತೂರು 08,ಮೇಕೇರಿ 10,ಬೆಟ್ಟಗೇರಿ 16,ಮದೆ 13,ಸಂಪಾಜೆ 14,ಚೆಂಬು,ಪೆರಾಜೆ 10, ಕರಿಕೆ 11,ಭಾಗಮಂಡಲ11, ಅಯ್ಯಂಗೇರಿ 7, ಕುಂದಚೇರಿ 8,ಬೇಂಗೂರು ಚೇರಂಬಾಣೆ 12, ಬಲ್ಲಾಮಾವಟಿ 8, ಎಮ್ಮೆಮಾಡು 9,ನಾಪೋಕ್ಲು 23, ಕುಂಜಿಲ (ಕಕ್ಕಬ್ಳೆ) 14, ಕೊಣಂಜಗೇರಿ (ಪಾರಾಣೆ) 9, ನರಿಯಂದಡ 15

 ಸೋಮವಾರಪೇಟೆ ತಾಲ್ಲೂಕು;

 ಕೊಡ್ಲಿಪೇಟೆ 15,ಬ್ಯಾಡಗೊಟ್ಟ 9, ಬೆನ್ನೂರು 13,ಹಂಡ್ಲಿ 11, ಶನಿವಾರಸಂತೆ 10,ದುಂಡಳ್ಳಿ 13,ನಿಡ್ತ 13, ಆಲೂರು 15, ಗೌಡಳ್ಳಿ 10, ದೊಡ್ಡಮಳ್ತೆ 9, ಶಾಂತಳ್ಳಿ 7, ತೋಳೂರು ಶೆಟ್ಟಳ್ಳಿ 13,ಬೆಟ್ಟದಳ್ಳಿ 7, ಹಾನಗಲ್ಲು 12, ಚೌಡ್ಲು 14, ಬೇಳೂರು, 15, ಕಿರಗಂದೂರು 10,ಐಗೂರು 11, ನೇರುಗಳಲೆ 12,ಗಣಗೂರು 8, ಹರದೂರು 11, ಮಾದಾಪುರ 16, ಗರ್ವಾಲೆ 5,

ತಾಲ್ಲೂಕು ವಿರಾಜಪೇಟೆ;

ಚೆಂಬೆಬೆಳ್ಳೂರು 10,ಬಿಟ್ಟಂಗಾಲ 16,ಬೇಟೋಳಿ 9, ಆರ್ಜಿ 7,ಕೆದಮುಳ್ಳೂರು 12, ಕಾಕೋಟುಪರಂಬು 11, ಕದನೂರು 10, ಅಮ್ಮತ್ತಿ 9, ಕಾರ್ಮಾಡು 12, ಬಿಳುಗುಂದ 8, ಹೊಸೂರು 12, ಪಾಲಿಬೆಟ್ಟ 9, ಕಣ್ಣಂಗಾಲ 10, ಹಾಲುಗುಂದ 10, ಸಿದ್ದಾಪುರ 25, ಮಾಲ್ದಾರೆ 18, ಚೆನ್ನಯ್ಯನಕೋಟೆ 17.

 ಕುಶಾಲನಗರ ತಾಲ್ಲೂಕು; ನೆಲ್ಲಿಹುದಿಕೇರಿ 20, ವಾಲ್ಲೂರು ತ್ಯಾಗತ್ತೂರು 11,ನಂಜರಾಯಪಟ್ಟಣ 8, ಗುಡ್ಡೆಹೊಸೂರು 15, ಕೂಡಿಗೆ 15, ಕೂಡುಮಂಗಳೂರು 24, ಹೆಬ್ಬಾಲೆ 14,ತೊರೆನೂರು 10, ಶಿರಂಗಾಲ 9, ಚೆಟ್ಟಳ್ಳಿ 15, ಕೆದಕಲ್ 8, ಕೊಡಗರಹಳ್ಳಿ 10, ಕಂಬಿಬಾಣೆ 6, 7ನೇ ಹೊಸಕೋಟೆ 10, ನಾಕೂರು ಶಿರಂಗಾಲ 8 ಸುಂಟಿಕೊಪ್ಪ 20

ಪೊನ್ನಂಪೇಟೆ ‌ತಾಲ್ಲೂಕು; ಕಿರುಗೂರು 10, ಅರುವತ್ತೋಕ್ಲು 12, ಬಿ.ಶೆಟ್ಟಿಗೇರಿ 6, ಹಾತೂರು 18, ದೇವರಪುರ 12,ತಿತಿಮತಿ 15, ಕಾನೂರು 12, ಬಾಳಲೆ 13, ನಿಟ್ಟುರೂ 9, ಪೊನ್ನಪ್ಪಸಂತೆ 8, ಮಾಯಾಮುಡಿ 15, ಶ್ರೀಮಂಗಲ 11, ನಾಲ್ಕೇರಿ 7, ಕೆ.ಬಾಡಗ 9,ಕುಟ್ಟ 16, ಟಿ.ಶೆಟ್ಟಿಗೇರಿ 16, ಬಲ್ಯಮಂಡೂರು 6,ಹುದಿಕೇರಿ16, ಬಿರುನಾಣಿ 11, ಗೋಣಿಕೊಪ್ಪಲು 21

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0