ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಳೆಯಿಂದ ಹಿನ್ನಡೆ
ಕುಶಾಲನಗರ, ಜು.7: ಕುಶಾಲನಗರ ವಲಯ ಅತ್ತೂರು ಶಾಖೆ ವ್ಯಾಪ್ತಿಯ ಅಂದಗೋವೆ ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಮಂಗಳವಾರ ಆರಂಭಿಸಲಾಯಿತು.
ಅಂದಗೋವೆಯ ತೋಟ ಒಂದರಲ್ಲಿ ಬೀಡುಬಿಟ್ಟಿದ್ದ ನಾಲ್ಕು ಆನೆಗಳ ಗುಂಪೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅತ್ತೂರು ಸಂರಕ್ಷಿತ ಅರಣ್ಯಕ್ಕೆ ಅಟ್ಟುವ ಸಂದರ್ಭ ಆನೆಗಳು ದೇವರಕಾಡು ಭಾಗದಲ್ಲಿ ನಿಲುಗಡೆ ಗೊಂಡಿದ್ದು ತೀವ್ರ ಮಳೆಯಿಂದ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗದೆ ಸ್ಥಗಿತಗೊಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಪಅರಣ್ಯಾಧಿಕಾರಿ ಉಮೇಶ್ ಸಹಿತ 15 ಮಂದಿ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ತಿಳಿಸಿದ್ದಾರೆ.
ವರದಿ: ಶ್ರೀಧರ್ ನಾರಾಯಣ್
What's Your Reaction?
Like
0
Dislike
0
Love
1
Funny
0
Angry
0
Sad
0
Wow
0

