ಕ್ರೀಡಾಕೂಟಗಳ ಆಯೋಜನೆಯಿಂದ ಜನಾಂಗ ಬಾಂಧವರು ಸಂಘಟಿತರಾಗುತ್ತಾರೆ;ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್ ಲಿಂಗಪ್ಪ; ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ವತಿಯಿಂದ ಕಾಲ್ಚೆಂಡು ಪಂದ್ಯಾವಳಿ

Jan 20, 2026 - 15:55
 0  256
ಕ್ರೀಡಾಕೂಟಗಳ ಆಯೋಜನೆಯಿಂದ ಜನಾಂಗ ಬಾಂಧವರು ಸಂಘಟಿತರಾಗುತ್ತಾರೆ;ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್ ಲಿಂಗಪ್ಪ;    ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ವತಿಯಿಂದ ಕಾಲ್ಚೆಂಡು ಪಂದ್ಯಾವಳಿ

ವಿರಾಜಪೇಟೆ:ಜನಾಂಗದ ಅಭಿವೃದ್ದಿ, ಪರಸ್ಪರ ಬಾಂಧವ್ಯ ವೃದ್ಧಿಗಾಗಿ ಕ್ರೀಡಾಕೂಟಗಳು ಆಯೋಜಿತಗೊಳ್ಳಬೇಕು. ಇದರಿಂದ ಸಂಘಟನೆಯು ಬಲವರ್ಧನೆಯಾಗುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಬಿ.ಆರ್. ಲಿಂಗಪ್ಪ ಅವರು ಕಾರ್ಯಕ್ರಮದಲ್ಲಿ ಹೇಳಿದರು.

 ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ವತಿಯಿಂದ ನಗರದ ತಾಲೂಕು ಮೈದಾನದಲ್ಲಿ ಪುರುಷರ 5+2 ಕಾಲ್ಚೆಂಡು ಪಂದ್ಯಾಟ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗಿಸಿ ಮಾತನಾಡಿದ ಬಿ.ಆರ್. ಲಿಂಗಪ್ಪ ಅವರು, ಜನಾಂಗ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಳು ಸಹಕಾರವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಸಂಘವು ಕಾಲ್ಚೆಂಡು ಪಂದ್ಯಾಟ ಆಯೋಜಿಸಿರುವುದು ಶ್ಲಾಘನೀಯ. ಸಂಘಟನಾತ್ಮಕವಾಗಿ ಹೋರಾಟ ಮಾಡಿದಲ್ಲಿ ಮಾತ್ರ ಹಕ್ಕು ಪಡೆದುಕೊಳ್ಳಲು ಸಾಧ್ಯ. ಹೆಚ್ಚು ಹೆಚ್ಚು ಜನಾಂಗ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕು ಎಂದು ಹೇಳಿದರು.

 ಮಾಜಿ ಪುರಸಭೆಯ ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್ ಅವರು ಮಾತನಾಡಿ ಬಿಲ್ಲವ ಸಮಾಜ ಬಾಂಧವರು ಮೊತ್ತ ಮೊದಲ ಬಾರಿಗೆ ಕಾಲ್ಚೆಂಡು ಪಂದ್ಯಾಟವನ್ನು ಅಯೋಜಿಸಿರುವುದು ಅಭಿನಂದಾನರ್ಹವಾಗಿದ್ದು, ಜನಾಂಗ ಬಾಂಧವರನ್ನು ಒಗ್ಗುಡಿಸುವುದು ಮತ್ತು ಬಾಂಧವ್ಯ ಬೆಸೆಯುವಂತೆ ಮಾಡುವುದಕ್ಕೆ ಕ್ರೀಡಾ ಕಾರ್ಯಕ್ರಮ ಸೂಕ್ತ ವೇದಿಕೆ ಎಂದು ಹೇಳಿದರು.

 ಕಾರ್ಯಕ್ರಮ ಉದ್ದೇಶಿಸಿ ಬಿಲ್ಲವ ಸೇವಾ ಸಂಘ ಮಹಿಳಾ ಘಟಕದ ಸದಸ್ಯರಾದ ಅನಿತಾ ಅವರು ಮಾತನಾಡಿದರು.

 ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ಅಧ್ಯಕ್ಷರಾದ ಬಿ.ಎಂ. ಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಕೋಟದ ಆಯೋಜನೆ ಹಲವು ವರ್ಷಗಳ ಕನಸು. ಇಂದು ಸಹಕಾರಗೊಂಡಿದೆ. ಎರಡು ದಿನಗಳು ನಡೆಯುವ ಕಾಲ್ಚೆಂಡು ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 17 ತಂಡಗಳು ಭಾಗವಹಿಸಿದೆ. ಸಂಘವು ಹಲವು ಜನಾಂಗದ ಅಭಿವೃದಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಕಾರ್ಯಕ್ರಮ ನಡೆಸುವುದು ಬಲು ಕಷ್ಟ ಸಾಧ್ಯ.ಇದು ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು. ಇದರಿಂದ ಸಂಘಟನೆಯು ಬಲವರ್ಧನೆಯಾಗುತ್ತದೆ.

 ಕ್ರೀಡಾ ಕಾರ್ಯಕ್ರಮಕ್ಕ ಸಹಕರಿಸಿದ ಸರ್ವ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಬಿಲ್ಲವ ಸೇವಾ ಸಂಘದ ವಿರಾಜಪೇಟೆ ತಾಲೂಕು ಗೌ. ಅಧ್ಯಕ್ಷರಾದ ಬಿ.ಆರ್ . ರಾಜ, ಉಪ ಅಧ್ಯಕ್ಷರಾದ ಪುರುಶೋತ್ತಮ್, ಉದ್ಯಮಿ ಬಿ.ಆರ್. ಬೋಜಪ್ಪ, ಕ್ರೀಡಾ ಸಂಚಾಲಕರಾದ ಅಶೋಕ್, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಡಿ. ಸುನಿತ, ಹಿರಿಯ ಕಾಲ್ಚೆಂಡು ಆಟಗಾರ ಎಲ್.ಜಿ ಭಾಸ್ಕರ್, ಉಪಸ್ಥಿತರಿದ್ದರು. ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಜನಾರ್ಧನ, ಸೇರಿದಂತೆ ಪಧಾಧಿಕಾರಿಗಳು ಸದಸ್ಯರು, ಸಮಾಜ ಬಾಂಧವರು ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾ ಪಟುಗಳು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು

 ವರದಿ; ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0