ಪೋಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಲು ಮುಂದಾಗಬೇಕು: ಬಿ.ಜಿ. ಅನಂತಶಯನ: ವಿರಾಜಪೇಟೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 24 ನೇ ವರ್ಷದ ವಾರ್ಷಿಕೋತ್ಸವ

Dec 26, 2025 - 09:48
 0  93
ಪೋಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಲು ಮುಂದಾಗಬೇಕು: ಬಿ.ಜಿ. ಅನಂತಶಯನ: ವಿರಾಜಪೇಟೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 24 ನೇ ವರ್ಷದ ವಾರ್ಷಿಕೋತ್ಸವ

ವಿರಾಜಪೇಟೆ: ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು,ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ ಆನಂತಶಯನ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿರಾಜಪೇಟೆಯಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 24 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪ ಬೆಳಗಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

 ಶಾಲೆಗಳು ಜ್ಞಾನ ಪಸರಿಸುವ ದೇವಾಲಯಗಳು ಇದ್ದಂತೆ. ಶಾಲೆಯಲ್ಲಿ ಕಲಿಕೆಗಾಗಿ ಬರುವ ವಿಧ್ಯಾರ್ಥಿಗಳು ಭಕ್ತರಂತೆ, ಜ್ಞಾನದ ಭಂಡಾರವಾದ ಶಾಲೆಗಳಲ್ಲಿ ಜ್ಞಾನ ಸಂಪಾದನೆಗಾಗಿ ಹಲವಾರು ಪುಸ್ತಕಗಳಿವೆ.ಆದರೆ ಪುಸ್ತಕಗಳು ಖರೀದಿಯ ವಸ್ತುಗಳಾಗಬಾರದು ಬದಲಿಗೆ ಜ್ಞಾನ ಸಂಪಾದನೆಯ ಕೇಂದ್ರಗಳಾಗಬೇಕು. ಕ್ರೀಡೆ, ಸಂಸ್ಕೃತಿ, ಕಲಿಕೆ,ಗಳನ್ನು ಬೆರೆಕೆ ಮಾಡಬಾರದು ಬದಲಿಗೆ ಆಸಕ್ತಿಯೊಂದಿಗೆ ಆಯ್ಕೆಮಾಡಿಕೊಂಡು ಕಲಿಕೆಗೆ ಮುಂದಾಗಬೇಕು ಎಂದು ಹೇಳಿದರು.

ಆರ್ಶೀವಾದ್ ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಗೌರವ್ ಅಯ್ಯಪ್ಪ ಅವರು ಮಾತನಾಡಿ ಮಿತ ಆಹಾರ ಸೇವನೆ, ಮನೆಯೂಟ, ವ್ಯಾಯಮದಿಂದ ಅರೋಗ್ಯಯುಕ್ತ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳಿಗೆ ಕಲಿಕೆಯೊಂದಿಗೆ ಆಹಾರದ ಉಪಯೋಗ ಕುರಿತು ಹೇಳಿಕೊಡುವ ಪ್ರವೃತ್ತಿ ಪೋಷಕರಲ್ಲಿ ಜಾಗೃತವಾಗಬೇಕು. ವಾತಾವರಣಕ್ಕೆ ಅನುಗುಣವಾಗಿ ಮಕ್ಕಳ ಪಾಲನೆ ಪೋಷಣೆಗೆ ಒತ್ತು ನೀಡುವಂತಾಗಬೇಕು. ಕೆಲವು ಮಕ್ಕಳಲ್ಲಿ ಅಸಾಧಾರಣ ಪ್ರತಿಭೆಗಳು ಕಂಡು ಬರುವುದು ಸಹಜ ಆದರೆ,ಗುರುತಿಸಲು ಪೋಷಕರು ಹಿಂಜರಿಯಬಾರದು. ಶಾಲೆಗಳಲ್ಲಿ ಕಲಿಕೆಗಾಗಿ ಉತ್ತಮ ವಾತಾವರಣ ಶಾಲಾ ಆಳಿತ ಮಂಡಳಿ ಸೃಷ್ಟಿ ಮಾಡಿಕೊಡುತ್ತದೆ. ಮಕ್ಕಳು ಸದ್ಬಳಕೆಯೊಂದಿಗೆ ಶಾಲೆಗೆ, ಶಿಕ್ಷಕರಿಗೆ, ಪೋಷಕರಿಗೆ ಆದರ್ಶಪ್ರಾಯವಾದ ವಿದ್ಯಾರ್ಥಿಗಳಾಗಿ ಶಿಸ್ತಿನೊಂದಿಗೆ ಉತ್ತಮ ವಿಧ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕರಾದ ಮಾದಂಡ ಪೂವಯ್ಯ ಅವರು, ಪ್ರಗತಿ ಆಂಗ್ಲ ಮಾಧ್ಯಮ ಶಾಲೆ 30 ವರ್ಷಗಳ ಇತಿಹಾಸವಿದ್ದು. ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಆರಂಭದಲ್ಲಿ ವಿದ್ಯಾರ್ಜನೆ ಪಡೆದುಕೊಂಡರು. ಇದೀಗ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಿರುವ ಶಾಲೆಯು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತನ್ನ ಚಾಪು ಮೂಡಿಸಿದೆ. ಇದಕ್ಕೆ ಪೋಷಕರು ಶಾಲೆಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆ. ವಿದ್ಯಾರ್ಥಿಗಳ ವಿಶಿಷ್ಟ ಸಾಧನೆಗಾಗಿ ಪ್ರೋತ್ಸಾಹಿಸುತ್ತಿರುವ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪ್ರೋತ್ಸಾಹ ಶ್ರಮಕ್ಕೆ ಸಂದ ಫಲ ವಿದ್ಯಾರ್ಥಿಗಳು ಮಾಡಿರುವ ಸಾಧನೆಯ ಸಂಕೇತವಾಗಿದೆ ಎಂದು ಹೇಳಿದರು.

ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಹ ಆಡಳಿತಾಧಿಕಾರಿಗಳಾದ ಶುಶ್ಮ ತಿಮ್ಮಯ್ಯ ಅವರು 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದ ವೇದಿಕೆಯಲ್ಲಿ 2025-26 ನೇ ಸಾಲೀನಲ್ಲಿ ಆದ್ವಿತಿಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದ ಕ್ರಿಕಿಟ್ ವಾಲಿಬಾಲ್, ಮಹಿಳಾ ಕ್ರಿಕಿಟ್ ಅಥ್ಲೆಟಿಕ್ಸ್, ಮತ್ತು ಇತರ ಕ್ರೀಡೆಗಳಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಗುರುತಿಸಿ ಪಾರಿತೋಷಕಗಳನ್ನು ನೀಡಲಾಯಿತು. ಬಾಲವಾಡಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ದೇಶದ ಸಂಸ್ಕೃತಿಯನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಗತಿ ಶಾಲೆಯ ಆಡಳಿತಾಧಿಕಾರಿಗಳಾದ ಮಾದಂಡ ತಿಮ್ಮಯ್ಯ ಅವರು ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ನಿತ್ಯಾ, ಅಸ್ಮಿಯ, ಮತ್ತು ಲಾವಣ್ಯ ಅವರುಗಳು ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಪ್ರತಿಮಾ ಅವರು ಸರ್ವರನ್ನು ವಂದಿಸಿದರು.

ಪ್ರಗತಿ ಆಂಗ್ಲ ಮಾದ್ಯಮ ಶಾಲೆ ವಿರಾಜಪೇಟೆ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಪೋಷಕರು ಹೆಚ್ಚಿನ ಸಂಖೆಯಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0