ಪೊನ್ನಂಪೇಟೆ:ತ್ಯಾಜ್ಯ ಸುರಿದ ಪ್ರಕರಣ, ಗುತ್ತಿಗೆದಾರನಿಗೆ ಬಿತ್ತು 10ಸಾವಿರ ದಂಡ

Dec 16, 2025 - 09:32
Dec 16, 2025 - 13:38
 0  583
ಪೊನ್ನಂಪೇಟೆ:ತ್ಯಾಜ್ಯ ಸುರಿದ ಪ್ರಕರಣ, ಗುತ್ತಿಗೆದಾರನಿಗೆ ಬಿತ್ತು 10ಸಾವಿರ ದಂಡ

ಪೊನ್ನಂಪೇಟೆ:ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಕೇರಳ ಮೂಲದ, ಸಿಐಟಿ ಕಾಲೇಜಿನ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಪ್ರದೀಪ್ ಸಿ.ಆರ್ ಎಂಬುವರು ತಮ್ಮ ಅಸ್ಸಾಂ ಮೂಲದ ಕಾರ್ಮಿಕರನ್ನು ವಿವಿಧಕ ಡೆಗೆ ಗುತ್ತಿಗೆ ಕೆಲಸಕ್ಕೆ ಕಳುಹಿಸುವ ಸಂದರ್ಭ ತಮ್ಮ ಮನೆಯ ತ್ಯಾಜ್ಯಗಳನ್ನು ಕೆಲಸ ನಿರ್ವಹಿಸುವ ಜಾಗಗಳಲ್ಲಿ ಸುರಿಯುತ್ತಿದ್ದು, ಸೋಮವಾರ ಬೇಗೂರಿನಲ್ಲಿ ಸುರಿದದ್ದನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಹುದಿಕೇರಿ ಗ್ರಾಮ ಪಂಚಾಯಿತಿಗೆ ಒಪ್ಪಿಸಿದ ಹಿನ್ನೆಲೆ ರೂ 10 ಸಾವಿರ ದಂಡವನ್ನು ಗುತ್ತಿಗೆದಾರ ಪ್ರದೀಪ್ ಸಿ.ಆರ್ ಅವರಿಗೆ ವಿಧಿಸಲಾಗಿದೆ. ದಂಡ ವಿಧಿಸಿ, ಸುರಿದ ತ್ಯಾಜ್ಯವನ್ನು ವಾಪಸು ತೆಗೆಯಿಸಿ ಕಳುಹಿಸಿರುವ ಘಟನೆ ನಡೆಯಿತು.

 ಈ ಸಂದರ್ಭ ಹುದಿಕೇರಿ ಪಂಚಾಯಿತಿ ಸದಸ್ಯರಾದ ಮಂಡೆಚಂಡ ರಜಿ ಪೊನ್ನಪ್ಪ, ಎಸ್. ಡಿ. ಎ. ತಿಮ್ಮಯ್ಯ ಕೇಚೆಟ್ಟೀರ ಅಪ್ಪಣ್ಣ, ಮತ್ರಂಡ ರಾಜೇಂದ್ರ, ಕೊಟ್ಟಂಗಡ ರಾಜ ಸುಬ್ಬಯ್ಯ, ಕಾಯಪಂಡ ಕಂಠಿ ಕೇಚೆಟ್ಟೀರ ಅಕ್ಷಯ್, ಮತ್ರoಡ ಮಿತ್ರ, ಮಲ್ಲಂಡ ವಿನಯ್, ಮಲ್ಲಂಡ ಧನೀಶ ಮಂಡಂಗಡ ಬೋಪಣ್ಣ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1