ಪುತ್ತರಿ ಹಬ್ಬ: ಕೊಡಗಿನ SOCIAL ಮೀಡಿಯಾ influencer ಗಳಿಂದ "ಹಸಿರು ಪಟಾಕಿ" ಕ್ಯಾಂಪೇನ್ ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್ ನೇತೃತ್ವ

Dec 3, 2025 - 22:32
 0  564
ಪುತ್ತರಿ ಹಬ್ಬ: ಕೊಡಗಿನ SOCIAL  ಮೀಡಿಯಾ influencer ಗಳಿಂದ "ಹಸಿರು ಪಟಾಕಿ" ಕ್ಯಾಂಪೇನ್   ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್ ನೇತೃತ್ವ
ಕಾಣತಂಡ ಬೀನಾ ಜಗದೀಶ್

ಮಡಿಕೇರಿ:ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ "ಪುತ್ತರಿ ಹಬ್ಬಕ್ಕೆ" ಕ್ಷಣಗಣನೆ ಆರಂಭಗೊಂಡಿದೆ. ಹೊಸ ಅಕ್ಕಿಯನ್ನು ಮನೆ ತುಂಬಿಸಿಕೊಳ್ಳಲು ಕಾಯುತ್ತಿದ್ದಾರೆ. ಇದೀಗ ಪುತ್ತರಿ ಹಬ್ಬದ ಭಾಗವಾಗಿ ಸೋಷಿಯಲ್ ‌ಮೀಡಿಯಾದಲ್ಲಿ "ಹಸಿರು ಪಟಾಕಿ" ಕ್ಯಾಂಪೇನ್ ಸುದ್ದು ಮಾಡುತ್ತಿದೆ.ಕೊಡಗಿನಲ್ಲಿ ‌ಪಟಾಕಿ ಸದ್ದಿಲ್ಲದೆ ಪುತ್ತರಿ ಹಬ್ಬ ಪೂರ್ಣಗೊಳ್ಳಲ್ಲ ಎಂಬ ಮಾತಿದೆ.

ಆದರೆ ಈ ಬಾರಿಯ ಪುತ್ತರಿ ಹಬ್ಬವನ್ನು ಕೊಡಗಿನಲ್ಲಿ ಪರಿಸರ ಕಾಳಜಿಯೊಂದಿಗೆ ಹಸಿರು ಪಟಾಕಿ ಬಳಸೋಣ ಎಂಬ ಸಂದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಸಮಾಜ ಸೇವಕಿ ಹಾಗೂ ನಟಿ ಕಾಣತಂಡ ಬೀನಾ ಜಗದೀಶ್ ಅವರು ಕೊಡಗಿನಲ್ಲಿ ಹಸಿರು ಪಟಾಕಿ ಕ್ಯಾಂಪೇನ್ ಆರಂಭಿಸಿ,ಎಲ್ಲೆಡೆ ಜಾಗೃತಿ ಮೂಡಿಸಿದ್ದಾರೆ ನಮ್ಮ ಕೊಡಗು ಸ್ವಚ್ಛ ಕೊಡಗು ಎಂಬ ಅಭಿಯಾನ ನಡೆದಿದೆ.ಈ ಅಭಿಯಾನಕ್ಕೆ ಅರ್ಥ ಬರಬೇಕಾದರೆ ಮುಂದೆಯೂ ನಮ್ಮ ಕೊಡಗನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೀಗಾಗಿ ಪುತ್ತರಿ ಹಬ್ಬದಲ್ಲಿ ಆದಷ್ಟು ಹಸಿರು ಪಟಾಕಿಯನ್ನು ಬಳಸಿ ನಮ್ಮ ಕೊಡುಗೆಯನ್ನು ನೀಡೋಣ ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇವರ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು,ಜಿಲ್ಲೆಯ Social media influencer ಗಳಾದ ಕೊಳೇರ ರೇವ, ವಿವಿನ್ ಐಯಣ್ಣ, ಮನಿಯಪಂಡ ಅಂಜು ಚೊಂದಮ್ಮ, ಬಿದ್ದಂಡ ಸುಮನ್ ಪೂವಯ್ಯ, ಕಲಿಯಂಡ ರಿನಿ ಬೋಪಣ್ಣ, ಮೀದೆರೀರ ಟೊಯ್ಸಿ ಪೂವಣ್ಣ, ತಡಿಯಂಗಡ ಗಾನ ಸೋಮಣ್ಣ ಅವರು ವೀಡಿಯೋ ಮಾಡಿ ಬೆಂಬಲ ಸೂಚಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1