ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ದೇವರಕೊಂಡ ಸಿಂಪಲ್ ಡಿನ್ನರ್ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!

ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ದೇವರಕೊಂಡ ಸಿಂಪಲ್ ಡಿನ್ನರ್ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!

ಮಡಿಕೇರಿ: ಸ್ಯಾಂಡಲ್‌ವುಡ್‌ನಿಂದ ಕರಿಯರ್‌ ಆರಂಭಿಸಿ ನ್ಯಾಷನಲ್‌ ಕ್ರಶ್‌ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಈ ವರ್ಷದ ಜನ್ಮದಿನವು ಮರೆಯಲಾಗದ ನೆನಪಾಗಿ ಉಳಿಯಲಿದೆ. ಹುಟ್ಟುಹಬ್ಬದ ಅಂಗವಾಗಿ ವಿರಾಜಪೇಟೆ ನಗರದ ʻಸೆರೆನಿಟಿ ಹಾಲ್‌ʼನಲ್ಲಿ (Serenity Convention Hall) ಅದ್ಧೂರಿ ಡಿನ್ನರ್‌ ಪಾರ್ಟಿ ಆಯೋಜಿಸಲಾಗಿತ್ತು.

ಈ ಸಂತಸದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹೌದು. ಫೆ.26 ರಂದು ರಾಜಸ್ಥಾನದ ಉದಯಪುರದಲ್ಲಿ ನೆರವೇರಿದ್ದ ವಿರೊಶ್‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ನೆರವೇರಿತ್ತು. ಆದ್ರೆ ಮದುವೆ ತವರಿಗೆ ಆಗಮಿಸಿದ ರಶ್ಮಿಕಾ ಮಂದಣ್ಣ ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಅವರಿಗೆ ತಂದೆಯಿಂದ ಅತ್ಯಮೂಲ್ಯ ಉಡುಗೊರೆಯೂ ಲಭಿಸಿದೆ.

ಹೌದು.. ಕೊಡಗಿನಲ್ಲಿ ಒಂದು ಅದ್ದೂರಿ ಬಂಗಲೆಯನ್ನ ರಶ್ಮಿಕಾಗೆ ಉಡುಗೊರೆಯಾಗಿ ನೀಡಿದ್ದಾರೆ ಅವರ ತಂದೆ ಮದನ್‌ ಮಂದಣ್ಣ. ವಿಶೇಷ ಅಂದ್ರೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ (Vijay Deverakonda) ಮದುವೆಯಾದ ನಂತರ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆಯ ʻಸೆರೆನಿಟಿ ಹಾಲ್‌ʼನಲ್ಲಿ ಡಿನ್ನರ್‌ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು.

 ವಿರಾಜಪೇಟೆಯ ಗಣ್ಯರು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಡಿನ್ನರ್‌ ಪಾರ್ಟಿಯು ಸಂಭ್ರಮದಿಂದ ಕೂಡಿತ್ತು. ಮದುವೆ ಬಳಿಕ ಕೊಡಗಿನಲ್ಲೂ ಸಾಂಪ್ರದಾಯಿಕವಾಗಿ ಆರತಕ್ಷತೆ ಇಟ್ಟುಕೊಳ್ಳುವುದಾಗಿ ತಿಳಿಸಿತ್ತು.

ಈ ಎರಡೂ ಸಂಭ್ರಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೇ ನೆರವೇರಿದೆ. ಬಂಧು ಬಳಗ, ಆಪ್ತರನ್ನಷ್ಟೇ ಆಹ್ವಾನಿಸಿ ಔತಣ ಮುಗಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಶ್ಮಿಕಾ ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವ ಸ್ಯಾರಿಯಲ್ಲಿ ಕಂಗೊಳಿಸಿದ್ದಾರೆ.