ಹಿರಿಯ ಜೀವಿಗಳಿಗೆ ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ
ಮಡಿಕೇರಿ ಆ.24 - ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರಂದು ಸ.ಹಿ.ಪ್ರಾ.ಶಾಲೆ ಮರಗೋಡುವಿನಲ್ಲಿ ನಡೆಸಲಾಯಿತು. .ಮಾಜಿ ಯೋಧ ಐಮಂಡ ನಾಣಯ್ಯ ನಿವೖತ್ತ ಶಿಕ್ಷಕ. ಕೆಂಜನ ಕೆಂಚಪ್ಪ ನಿವೃತ್ತ ಶಿಕ್ಷಕಿ ಕೆ.ಜಿ.ವಿಶಾಲಾಕ್ಷಿ ಅವರನ್ನ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿ ವಿಶಾಲಾಕ್ಷಿ ಮಾತನಾಡಿ, ಪ್ರತಿಯೊಂದು ಕೆಲಸ ಕಾರ್ಯ ಮಾಡುವಾಗ ಹಿರಿಯರ ನೆನಪಿಸಿಕೊಳ್ಳಬೇಕು.ನಮ್ಮ ಜೀವನ ರೂಪಿಸಲು ಅವರ ಶ್ರಮ ಅಪಾರವಾದದ್ದು ಎಂಬ ಕರೆ ನೀಡಿದರು.
ಶಿಕ್ಷಕ ಕೆಂಜನ ಕೆಂಚಪ್ಪ ಮಾತನಾಡಿ, , ಹಿರಿಯರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆದಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ನಿದೇ೯ಶಕ ಕೋಚನ ಲವಿನ್ ಮಾತನಾಡಿ, ಹಿರಿಯರು ಸಮಾಜದ ಮಾಣಿಕ್ಯ ಅವರ ಅನುಭವ ಸಮಾಜಕ್ಕೆ ಕೊಡುಗೆಯಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಪಿ.ಎಂ.ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಕಾಂಗೀರ ಸತೀಶ್, ಸವಿತಾ, ವರ್ಷಿತ, ಅರೆಕಾಡು ಶಾಲಾ ಸಹ ಶಿಕ್ಷಕ ಅಶ್ರಫ್,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ನೇತ್ರಾ ಎಂ.ಯು. , ,ಸದಸ್ಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊಂಪುಳೀರ ದನಿತರಕ್ಷಿತ್ ನಿರೂಪಿಸಿ, ಕೊಂಪುಳೀರ ಗಾನವಿ ಸ್ವಾಗತಿಸಿದರು. ಮಿಸ್ಟಿ ಹಿಲ್ಸ್ ನಿದೇ೯ಶಕ ಕಟ್ಟೆಮನೆ ಸೋನಜಿತ್ ವಂದಿಸಿದರು. ಸನ್ಮಾನಿತರ ಪರಿಚಯವನ್ನು ರೇಷ್ಮಾ ನೆರವೇರಿಸಿದರು. . .ಶಾಲಾ ವಿದ್ಯಾರ್ಥಿಗಳು ಹಿರಿಯರ ಮಹತ್ವದ ಬಗ್ಗೆ ಮಾತನಾಡಿದರು..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
