ನಿವೃತ್ತ ಡಿವೈಎಸ್ಪಿ ಪುತ್ರಿಗೆ ಗಂಡನ ಮನೆಯವರಿಂದ ಕಿರುಕುಳ: ಮಾವ ಮಾಡಿದ್ದೇನು ಗೊತ್ತಾ!!

Nov 20, 2025 - 22:42
Nov 20, 2025 - 22:43
 0  2.2k
ನಿವೃತ್ತ ಡಿವೈಎಸ್ಪಿ  ಪುತ್ರಿಗೆ ಗಂಡನ ಮನೆಯವರಿಂದ ಕಿರುಕುಳ:  ಮಾವ ಮಾಡಿದ್ದೇನು ಗೊತ್ತಾ!!

ನೆಲಮಂಗಲ, ನ.20: ನಿವೃತ್ತ ಡಿವೈಎಸ್ಪಿ ಅವರ ಪುತ್ರಿ ಅನಿತಾ ಅವರು ಗಂಡನ ಮನೆಯವರ ವಿರುದ್ಧ ತೀವ್ರ ಕಿರುಕುಳ, ದೈಹಿಕ ದೌರ್ಜನ್ಯ ಹಾಗೂ ಮಾವನಿಂದ ಲೈಂಗಿಕ ಬೇಡಿಕೆ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

2023ರ ನವೆಂಬರ್ 2ರಂದು ಅನಿತಾ–ಗೋವರ್ಧನ್ ಮದುವೆ ವೈಭವದಿಂದ ನೆರವೇರಿತ್ತು. ಮದುವೆಗಾಗಿ ಅನಿತಾ ಅವರ ತಂದೆ ಚಿನ್ನ, ಬೆಳ್ಳಿ ಹಾಗೂ ಇತರೆ ಖರ್ಚುಗಳಿಗೆ ಸೇರಿ ಸುಮಾರು 25 ಲಕ್ಷ ರೂ. ವೆಚ್ಚ ಮಾಡಿದ್ದರು ಎನ್ನಲಾಗಿದೆ. ಆದರೆ ಮದುವೆಯಾದ ಕೆಲವು ದಿನಗಳಲ್ಲಿ ಗಂಡ ಡಾ. ಗೋವರ್ಧನ್, ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ನೀಡುವಂತೆ ಒತ್ತಡ ತರಲು ಶುರುಮಾಡಿದರೆಂದು ಅನಿತಾ ಹೇಳಿದ್ದಾರೆ. “ಈ ಹಣ ಬಂದರೆ ಸ್ವಂತ ನರ್ಸಿಂಗ್ ಹೋಂ ಆರಂಭಿಸಬಹುದು” ಎಂದು ಗಂಡ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಅನಿತಾ ತಿಳಿಸಿದ್ದಾರೆ.

ಇಷ್ಟೇ ಅಲ್ಲದೇಮ ಮಾವ ಪ್ರೊ. ನಾಗರಾಜು ಅವರು ಅನಿತಾಗೆ ಅಸಭ್ಯವಾಗಿ ಮಾತನಾಡುವುದು, ಅವಮಾನಿಸುವುದು, ದೈಹಿಕ ಕಿರುಕುಳ ನೀಡಲು ಯತ್ನಿಸುವುದು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಮದುವೆಗೆ ತಿಂಗಳುಗಳು ಆಯಿತು, ಇನ್ನೂ ಮಕ್ಕಳಾಗಿಲ್ಲವೇ? ಸರಿಯಾಗಿ ಸಂಸಾರ ಮಾಡುತ್ತಿಲ್ಲವೇ? ಇಲ್ಲದಿದ್ದರೆ ನಾನು ಬರುತ್ತೇನೆ… ಮಾಡರ್ನ್ ಹುಡುಗಿಯಂತೆ ಅರ್ಧ ಬಟ್ಟೆ ಹಾಕಿಕೊಂಡು ನನ್ನ ಮುಂದೆ ಬಾ,” ಎಂದು ಹೇಳಿ ಲೈಂಗಿಕ ಬೇಡಿಕೆ ಇಟ್ಟಿದ್ದಾನೆ ಎಂದು ಅನಿತಾ ಪೊಲೀಸರಿಗೆ ತಿಳಿಸಿದ್ದಾರೆ.

ಅನಿತಾ ಈ ವಿಷಯವನ್ನು ಗಂಡ ಹಾಗೂ ಅತ್ತೆಗೆ ಹೇಳಿದಾಗ, “ಇದು ಮನೆಯ ವಿಷಯ, ನೀನೇ ಹೊಂದಿಕೊಂಡು ಹೋಗಬೇಕು” ಎಂದು ಪ್ರತಿಕ್ರಿಯಿಸಿದರೆಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.

What's Your Reaction?

Like Like 1
Dislike Dislike 4
Love Love 2
Funny Funny 0
Angry Angry 3
Sad Sad 0
Wow Wow 0