ಮಾಲ್ದಾರೆ ಉಪಠಾಣೆಗೆ ಎಸ್‌ಪಿ ಬಿಂದುಮಣಿ ಭೇಟಿ; ಚೆಕ್‌ಪೋಸ್ಟ್ ಪರಿಶೀಲನೆ

Feb 4, 2026 - 10:48
 0  697
ಮಾಲ್ದಾರೆ ಉಪಠಾಣೆಗೆ ಎಸ್‌ಪಿ ಬಿಂದುಮಣಿ ಭೇಟಿ;  ಚೆಕ್‌ಪೋಸ್ಟ್ ಪರಿಶೀಲನೆ

ಸಿದ್ದಾಪುರ :-ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಕೊಡಗು–ಮೈಸೂರು ಗಡಿ ಪ್ರದೇಶದಲ್ಲಿರುವ ಮಾಲ್ದಾರೆ ಉಪಠಾಣೆಗೆ ಭೇಟಿ ನೀಡಿ, ಅಲ್ಲಿನ ಚೆಕ್‌ಪೋಸ್ಟ್‌ನ ವ್ಯವಸ್ಥೆ ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಹಾಗೂ ಕಳ್ಳ ಸಾಗಾಣಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆಗಳನ್ನು ನೀಡಿದರು. ಗಡಿ ಭಾಗದಲ್ಲಿ ನಿಗಾವಹಣೆ ಹೆಚ್ಚಿಸಿ, ಶಂಕಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳ ತಪಾಸಣೆಯನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0