ಸಮಾಜದ ಅಗತ್ಯತೆಗೆ ತಕ್ಕಂತೆ ಸೇವಾ ಸಂಸ್ಥೆಗಳು ಯೋಜನೆ ರೂಪಿಸಬೇಕು - ಅನಿಲ್ ಸಲಹೆ
ಮಡಿಕೇರಿ ಏ. 09- ಜೆನ್ ಜೀ ಪೀಳಿಗೆಯನ್ನು ಕೂಡ ಗಮನದಲ್ಲಿರಿಸಿಕೊಂಡು ರೋಟರಿಯಂಥ ಸೇವಾ ಸಂಸ್ಥೆಗಳು ಯೋಜನೆ ರೂಪಿಸಬೇಕು. ನವಪೀಳಿಗೆಗೆ ಸಾಮಾಜಿಕ ಸೇವೆಯ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಮುಂದಾಗಬೇಕೆಂದು ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಕರೆ ನೀಡಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ರೋಟರಿ ವಿಷನ್ ಬಗ್ಗೆ ಅನಿಲ್ ಮಾತನಾಡಿದರು.
ಪ್ರಸ್ತುತ ವಿಶ್ವದಾದ್ಯಂತ 11.25 ಲಕ್ಷ ರೋಟರಿ ಸದಸ್ಯರಿದ್ದು, 2030 ರಲ್ಲಿ ಅಂತರರಾಷ್ಟ್ರೀಯ ರೋಟರಿ ತನ್ನ 125 ನೇ ವಷ೯ ಆಚರಿಸಿಕೊಳ್ಳುವ ಸಂದಭ೯ 12.50 ಲಕ್ಷ ಸದಸ್ಯರ ಗುರಿಯನ್ನು ರೋಟರಿ ಹೊಂದಿದೆ ಎಂದು ತಿಳಿಸಿದರು. ರೋಟರಿ ಸೇವಾ ಯೋಜನೆಗಳಲ್ಲಿಯೂ ಮಾಪಾ೯ಡು ಅತ್ಯಗತ್ಯವಾಗಿದ್ದು ಪ್ರತೀ ವಷ೯ವೂ ಒಂದೇ ಯೋಜನೆಗೆ ಜೋತು ಬೀಳದೆ ಜೆನ್ ಜೀ ಪೀಳಿಗೆಯನ್ನೂ ಗಮನದಲ್ಲಿರಿಸಿಕೊಂಡು ಸಮಾಜದ ಅತ್ಯಗತ್ಯವನ್ನೂ ತಿಳಿದುಕೊಂಡು ವಿನೂತನ ಯೋಜನೆಗಳನ್ನು ರೂಪಿಸುವತ್ತ ರೋಟರಿ ಪ್ರಮುಖರು ಮುಂದಾಗಬೇಕೆಂದು ಅವರು ಹೇಳಿದರು.
ಯುವ ಪೀಳಿಗೆಯಲ್ಲಿ ಸೇವಾ ಕಾಳಜಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿನ ಇಂಟರ್ಯಾಕ್ಟ್ ಮತ್ತು ಕಾಲೇಜು ಹಂತದಲ್ಲಿನ ರೋಟರ್ಯಾಕ್ಟ್ ಕ್ಲಬ್ ಗಳನ್ನು ಮತ್ತಷ್ಟು ಹೆಚ್ಚಿಸಿ ಯುವಕ, ಯುವತಿಯರಿಗೆ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಮೂಡಿಸುವಂತಾಗಬೇಕೆಂದೂ ಅವರು ಹೇಳಿದರು.
ಭಾರತದಲ್ಲಿ ಪ್ರಸ್ತುತ 4790 ರೋಟರಿ ಕ್ಲಬ್ ಗಳಲ್ಲಿ 1.80 ಲಕ್ಷ ಸದಸ್ಯರಿದ್ದಾರೆ. ಕಳೆದೊಂದು ವಷ೯ಧಲ್ಲಿ 46 ನೂತನ ರೋಟರಿ ಕ್ಲಬ್ ಗಳು ಸೇಪ೯ಡೆಯಾಗಿದ್ದು, ವಿಶ್ವದಲ್ಲಿ 572 ಹೊಸ ಕ್ಲಬ್ ಗಳು ಪ್ರಾರಂಭವಾಗಿದೆ. ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ರೋಟರಿ ಸೇವಾ ಸಂಸ್ಥೆಯನ್ನು ಸೇಪ೯ಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ ಎಂದೂ ಅನಿಲ್ ಹೇಳಿದರು.
ಬೆಂಗಳೂರಿನ ಉದ್ಯಮಿ ರವಿಶಂಕರ್ ಡಾಕೋಜಿಯವರು ರೋಟರಿ ಸಂಸ್ಥೆಗೆ 500 ಕೋಟಿ ರು.ಗಳನ್ನು ಕೊಡುಗೆಯಾಗಿ ನೀಡಿದ್ದು ಧನ್ಯವಾದ್ ಹೆಸರಿನಲ್ಲಿ ಸಮಾಜಕ್ಕೆ ಕೖತಜ್ಞತೆ ಸಲ್ಲಿಸುವ ವೈವಿಧ್ಯಮಯ ಕಾಯ೯ಯೋಜನೆಗೆ ಮುಂದಾಗಿದ್ದಾರೆ. ಕೊಡಗಿನಲ್ಲಿಯೂ ಸೂಕ್ತ ಜಾಗ ದೊರತಲ್ಲಿ ಧನ್ಯವಾದ್ ಯೋಜನೆ ಮೂಲಕ ಪರಿಸರ, ನೆಲ, ಜಲ ಸಂಬಂಧಿತ ಯೋಜನೆ ಜಾರಿಗೊಳಿಸಲು ಅವಕಾಶವಿದೆ ಎಂದೂ ಅನಿಲ್ ಮಾಹಿತಿ ನೀಡಿದರು.
ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಸ್ವಾಗತಿಸಿ, , ಕಾಯ೯ದಶಿ೯ ಪ್ರಮೀಳಾ ಶೆಟ್ಟಿ ವಂದಿಸಿದರು. ಮುಂದಿನ ಸಾಲಿನ ಕಾರ್ಯದರ್ಶಿ ಸ್ಮಿತಾ ಚಂಗಪ್ಪ, ನಿಕಟಪೂವ೯ ಅಧ್ಯಕ್ಷ ಹರೀಶ್ ಕಿಗ್ಗಾಲು, ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.