ಮಾಚ್೯ 4 ರಂದು ರಸ್ತೆಗೆ ಶಕ್ತಿ ಗೋಪಾಲಕೖಷ್ಣ ಹೆಸರಿನ ಫಲಕ ಉದ್ಘಾಟನೆ

Mar 1, 2026 - 16:01
 0  416
ಮಾಚ್೯ 4 ರಂದು ರಸ್ತೆಗೆ ಶಕ್ತಿ ಗೋಪಾಲಕೖಷ್ಣ  ಹೆಸರಿನ ಫಲಕ ಉದ್ಘಾಟನೆ

ಮಡಿಕೇರಿ: ಮಾಚ್೯ 1 - ನಗರದ ಪತ್ರಿಕಾಭವನ ಬಳಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ಶಕ್ತಿ ಗೋಪಾಲಕೖಷ್ಣ ಹೆಸರನ್ನಿಡಲು ನಗರಸಭೆ ಅನುಮೋದನೆ ನೀಡಿದ್ದು ಈ ಹೆಸರಿನ ರಸ್ತೆಯನ್ನು ಮಾಚ್೯ 4 ರಂದು ಬುಧವಾರ ಉದ್ಘಾಟಿಸಲಾಗುತ್ತಿದೆ.

ಕೊಡಗು ಪತ್ರಕತ೯ರ ಸಂಘದಿಂದ ಮಾಚ್೯ 4 ರಂದು ಆಯೋಜಿತ ಕಾಯ೯ಕ್ರಮದಲ್ಲಿ ಬೆಳಗ್ಗೆ 10.30 ಗಂಟೆಗೆ ಪತ್ರಿಕಾಭವನ ಮುಂಭಾಗದಲ್ಲಿ ರಸ್ತೆಯ ನಾಮಫಲಕವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅನಾರಣಗೊಳಿಸಲಿದ್ದಾರೆ.

ತರುವಾಯ ಬೆಳಗ್ಗೆ 10.45 ಗಂಟೆಗೆ ರೆಡ್ ಬ್ರಿಕ್ಸ್ ಇನ್ ಸತ್ಕಾರ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶಾಸಕ ಡಾ.ಮಂಥರ್ ಗೌಡ, ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ವಾಡ್೯ ಸದಸ್ಯ, ಮೂಡಾ ಅಧ್ಯಕ್ಷ ಬಿ.ವೈ.ರಾಜೇಶ್, ನಗರಸಭೆಯ ಪೌರಾಯುಕ್ತ ಹೆಚ್. ಆರ್.ರಮೇಶ್, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0