Kodagu

ಶನಿವಾರಸಂತೆ:ವಿಶ್ವ ಸೊಳ್ಳೆ ದಿನದ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ

admincoorgdaily

ಶನಿವಾರಸಂತೆ: ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡ್ಲಿಪೇಟೆ, ಶನಿವಾರಸಂತೆ ಭಾರತಿ ವಿದ್ಯಾ ಸಂಸ್ಥೆ ಪ್ರೌಢಶಾಲಾ ವಿಭಾಗ ಇವರ ಸಹಯೋಗದಲ್ಲಿ ವಿಶ್ವ ಸೊಳ್ಳೆ ದಿನ ಕುರಿತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಭಾರತಿ ಪ್ರೌಢ ಶಾಲಾ ಅವರಣದಲ್ಲಿ ಬುಧವಾರ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮಾತನಾಡಿ ವಿಶ್ವ ಸೊಳ್ಳೆ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.

ಮಲೇರಿಯಾ ಜ್ವರ ಶೀಘ್ರ ವಾಗಿ ಪತ್ತೆ ಹಚ್ಚಿ ಸಂಪೂರ್ಣವಾದ ಚಿಕಿತ್ಸೆ ಯನ್ನು ನೀಡುವುದರ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದರು. ಡೆಂಗ್ಯೂ ಜ್ವರ ಹಾಗೂ ಮಲೇರಿಯಾ ಜ್ವರದ ಲಕ್ಷಣಗಳ ಬಗ್ಗೆ ಮತ್ತು ಚಿಕಿತ್ಸೆ ಯ ಬಗ್ಗೆ ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ಹಾಗೂ ಮಲೇರಿಯ ಜ್ವರದ ಬಗ್ಗೆ, ಚಿಕೂನ್ ಗುನ್ಯಾ ಜ್ವರದ ಬಗ್ಗೆ ತಿಳಿಸಿದರು. ಹಾಗೂ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದ ಬಗ್ಗೆ , ವಿಶ್ವ ಜನಸಂಖ್ಯಾ ದಿನಾಚರಣೆಯ ಮಹತ್ವದ ಬಗ್ಗೆ, ಹಾಗೂ ಪರಿಸರ ಸ್ವಚ್ಛತೆಯ ಬಗ್ಗೆ, ನೀರಿನ ಶುಚಿತ್ವದ ಬಗ್ಗೆ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿಯನ್ನು ನೀಡಿದರು.

ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಮಾತನಾಡಿ, ಕ್ಷಯರೋಗದ ಲಕ್ಷಣಗಳ ಬಗ್ಗೆ ಕ್ಷಯರೋಗದ ವಿಧಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು, ಕ್ಷಯರೋಗ ರೋಗ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ವಹಿಸಿದ್ದರು, ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ದುಂಬಿತ, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳಾದ ರಶೀದ್, ಆಶಾ ಕಾರ್ಯಕರ್ತೆಯವರಾದ ಜ್ಯೋತಿ, ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರುಗಳಾದ ಮಂಗಳ, ಶಬಾನ, ಭವಾನಿ, ಸರೋಜಿನಿ, ಹಾಗೂ ಅರೋಗ್ಯ ಕೇಂದ್ರದ ಆಪ್ತ ಸಮಾಲೋಚಕರಾದ ಶೈಲಜಾ ಹಾಜರಿದ್ದರು.