ನಾಲ್ಕು ದಿನಗಳ ಬಳಿಕ ಪತ್ತೆಯಾದ ಶರಣ್ಯ: ಫಲಿಸಿತು ಕುಡಿಯ ಜನಾಂಗದ ಪ್ರಾರ್ಥನೆ
admincoorgdaily

ಮಡಿಕೇರಿ, ಏ 05: ಕಳೆದ ನಾಲ್ಕು ದಿನಗಳ ಹಿಂದೆ ತಡಿಯಂಡಮೋಳ್ ಬೆಟ್ಟಕ್ಕೆ ಟ್ರಕ್ಕಿಂಗ್ ಗೆಂದು ತೆರಳಿ ಕಾಣೆಯಾಗಿದ್ದ ಕೇರಳ ಮೂಲದ ಶರಣ್ಯ(35).ಪತ್ತೆಯಾಗಿದ್ದಾಳೆ.
ಕಾಡಿನಲ್ಲಿ ದಾರಿ ತಪ್ಪಿದ ಪರಿಣಾಮ ಹಾಗೂ ಮೊಬೈಲ್ ಬ್ಯಾಟರಿ ಚಾರ್ಜ್ ಇಲ್ಲದರಿಂದ, ಮೊಬೈಲ್ ಕಟ್ಟಾಗಿ ಸಂಪರ್ಕಕ್ಕೆ ಸಾಧ್ಯವಾಗಿಲ್ಲ ಈಕೆಯನ್ನು ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ, ಎ ಎನ್ ಎಫ್ ತಂಡ, ಸ್ಥಳೀಯರು ತೀವ್ರ ಶೋಧ ನಡೆಸಿದ ಪರಿಣಾಮ ಇದೀಗ ಆಕೆ ಕಾಡಿನೊಳಗೆ ಪತ್ತೆಯಾಗಿದ್ದು ಆಕೆಯನ್ನು ಪೊಲೀಸರು ಕಾಡಿನಿಂದ ಕರೆತರಲಾಗುತ್ತಿದೆ.