ಸಿದ್ದಾಪುರ;ಸ್ಕೂಟಿ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿಯ ಮೇಲೆ ಹಿಂಬದಿಯಿಂದ ಬಂದ ಕಾರು ಹರಿದು ಮೃತ್ಯು

Feb 26, 2026 - 23:24
Feb 26, 2026 - 23:28
 0  2.9k
ಸಿದ್ದಾಪುರ;ಸ್ಕೂಟಿ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿಯ ಮೇಲೆ ಹಿಂಬದಿಯಿಂದ ಬಂದ ಕಾರು ಹರಿದು ಮೃತ್ಯು

ಸಿದ್ದಾಪುರ; ಭೀಕರ ರಸ್ತೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ನಡೆದಿದೆ.

ಅಮ್ಮತ್ತಿ ಕಡೆಯಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ವ್ಯಕ್ತಿಗೆ ಸ್ಕೂಟಿ ಹೊಡೆದಿದ್ದು ಡಿಕ್ಕಿ ರಭಸಕ್ಕೆ ರಸ್ತೆಬಿದ್ದ ವ್ಯಕ್ತಿ ಮೇಲೆ ಹಿಂಬದಿಯಿಂದ ಬಂದ ಕಾರೊಂದು ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆನಂದಪುರ ನಿವಾಸಿ ಏನೋಸ್ ಮನೋಹರ್ (ಮನು) 43 ಎಂಬಾತನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

 ಗಂಭೀರ ಸ್ಥಿತಿಯಲ್ಲಿದ್ದ ಸ್ಕೂಟಿ ಸವಾರ ನೆಲ್ಲಿಹುದಿಕೇರಿಯ ಹಂಸ ಎಂಬಾತನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಡಿಕ್ಕಿ ಪಡಿಸಿ ಪರಾರಿಯಾದ ಕಾರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 2
Sad Sad 10
Wow Wow 0