ಸಿದ್ದಾಪುರ: SYS ಕಾಫಿ ಅಂಗಡಿಯಲ್ಲಿ ನಗದು ಕಳವು;ಕೇರಳ ಮೂಲದ ಆರೋಪಿಯ ಬಂಧನ

Jan 19, 2026 - 23:08
 0  2.1k
ಸಿದ್ದಾಪುರ: SYS ಕಾಫಿ ಅಂಗಡಿಯಲ್ಲಿ ನಗದು ಕಳವು;ಕೇರಳ ಮೂಲದ ಆರೋಪಿಯ ಬಂಧನ
ಬಂಧಿತ ಆರೋಪಿ

ಸಿದ್ದಾಪುರ:- ಸಿದ್ದಾಪುರದ ವಿರಾಜಪೇಟೆ ರಸ್ತೆಯಲ್ಲಿರುವ SYS ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.

ದಿನಾಂಕ 18.01.2026ರಂದು ಅಂಗಡಿಯ ಟೇಬಲ್ ಡ್ರಾ ಯಲ್ಲಿದ್ದ ₹1,15,680 ನಗದು ಕಳವಾಗಿತ್ತು. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 07/2026 ಕಲಂ 331(3), 305(a) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸೋಮವಾರ ಕೇರಳದ ಶಿವಪುರಂ ಗ್ರಾಮ, ತಲಚೇರಿ ತಾಲೂಕು, ಕಣ್ಣೂರು ಜಿಲ್ಲೆ ಹ್ಯಾರೀಸ್ (47) ಆರೋಪಿಯನ್ನು ಎಂಬಾತನನ್ನು ಬಂಧಿಸಿದ್ದು ಕಳುವಾದ ನಗದು ಹಣವನ್ನು ವಶಪಡಿಸಿಕೊಂಡು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

What's Your Reaction?

Like Like 3
Dislike Dislike 0
Love Love 0
Funny Funny 1
Angry Angry 1
Sad Sad 4
Wow Wow 0