ಸಿದ್ದಾಪುರ; 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Feb 1, 2026 - 13:46
 0  390
ಸಿದ್ದಾಪುರ; 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಸಿದ್ದಾಪುರ :- ಪ್ರತಿಯೊಂದು ಅಂತ್ಯವೂ ಒಂದು ಹೊಸ ಆರಂಭ” ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ಸಿದ್ದಾಪುರದ ಸಂತ ಅನ್ನಮ್ಮ ಶಾಲೆ (ಸಿಬಿಎಸ್ಇ)ಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಶನಿವಾರ ಭಾವಪೂರ್ಣವಾಗಿ ಆಯೋಜಿಸಲಾಯಿತು.

. ಸಮಾರಂಭದಲ್ಲಿ ಮಾತನಾಡಿದ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಒಂದು ಮಹತ್ವದ ಹಂತಕ್ಕೆ ವಿದಾಯ ಹೇಳಿ, ಹೊಸ ಅಧ್ಯಾಯದತ್ತ ಹೆಜ್ಜೆ ಇಡುವ ಈ ಕ್ಷಣವನ್ನು ಸ್ಮರಣೀಯವಾಗಿಸಲು ಶಾಲಾ ಆಡಳಿತ ಮಂಡಳಿ ಈ ಕಾರ್ಯಕ್ರಮವನ್ನು ರೂಪಿಸಿದೆ ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಾಲೆಯಲ್ಲಿ ಕಳೆದ ಅಮೂಲ್ಯ ಕ್ಷಣಗಳು ಹಾಗೂ ಮುಂದಿನ ಬದುಕಿನ ಹಾದಿಗೆ ಅಗತ್ಯವಾದ ಪ್ರೇರಣಾತ್ಮಕ ಸಂದೇಶಗಳು ಈ ಸಮಾರಂಭದ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು. ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಲೆನಿಟ್,ಶಾಲೆಯ ಸಂಚಾಲಕಿ ಸಿಸ್ಟರ್ ಅರ್ಪಿತಾ,ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0