ಹುಟ್ಟು ಹಬ್ಬಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಸಮಾಜ ಸೇವಕ ಬಿ.ಎಂ.ಗಣೇಶ್:ಬಡಕುಟುಂಬಕ್ಕೆ ಐದನೇ ಮನೆ ಹಸ್ತಾಂತರ

Jan 8, 2026 - 10:53
 0  890
ಹುಟ್ಟು ಹಬ್ಬಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ  ಸಮಾಜ ಸೇವಕ ಬಿ.ಎಂ.ಗಣೇಶ್:ಬಡಕುಟುಂಬಕ್ಕೆ ಐದನೇ ಮನೆ ಹಸ್ತಾಂತರ

ವಿರಾಜಪೇಟೆ:ಸಮಾಜ ಸೇವಕ, ವಿದ್ಯುತ್ ಗುತ್ತಿಗೆದಾರ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಅವರು ವಿಧವಾ ಮಹಿಳೆಯ ಕುಟುಂಬಕ್ಕೆ ಮನೆಯೊಂದು ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ.

ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ಗ್ರಾಮದ ಪಾಲೆಪಾರೆ ( ಹೂಕಾಡ್ ಪೈಸಾರಿ) ಸರ್ವೆ ಸಂಖ್ಯೆ 236/1 ರಲ್ಲಿ ವಾಸವಿದ್ದ ದಿವಂಗತ ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳ ಮತ್ತು ಅವರ ಮೂವರು ಮಕ್ಕಳ ಕುಟುಂಬಕ್ಕೆ ನೂತನ ಮನೆ ನಿರ್ಮಾಣ ಮಾಡಿಕೊಟ್ಟು ಬಿ.ಎಂ. ಗಣೇಶ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶಕ್ಕೆ ಚಾಲನೆ ನೀಡಿದರು. 

ಬಿ.ಎಂ. ಗಣೇಶ್ ಅವರು ಬಡ ಕುಟುಂಬಗಳನ್ನು ಗುರುತಿಸಿ ಸತತ ಐದು ವರ್ಷಗಳಿಂದ ತನ್ನ ಗಳಿಕೆಯ ಒಂದು ಭಾಗವನ್ನು ಗುಡಿಸಲು ಮನೆಯಲ್ಲಿ ಜೀವನ ಸಾಗಿಸುತಿದ್ದ ಕುಟುಂಬಗಳಿಗೆ ಆಸರೆಯಾಗುವಂತೆ ನೂತನ ಮನೆ ನಿರ್ಮಾಣ ಮಾಡಿ ನೀಡುತ್ತಾ ಬಂದಿರುವುದು ನಿಕನಲ್ಲದ ಭಾವನೆಗೆ ಕರುಣೆಯ ಸಾರ ಎಂಬುದಾಗಿದೆ. ಗಣೇಶ್ ಅವರು ಮೊದಲು ಕ್ರಮವಾಗಿ ಪೆರುಂಬಾಡಿ ಗ್ರಾಮದ ಎರವರ ಕಾಳ, ಕೆದಮೂಳ್ಳೂರು ಗ್ರಾಮ ತರ್ಮೇಮೊಟ್ಟೆ ಕಮಲ ಎಂಬುವವರಿಗೆ, ಪೆರುಂಬಾಡಿ ಗ್ರಾಮದ ತರ್ಮೇಕಾಡು ಪೈಸಾರಿಯ ಎರವರ ಶಂಕರ ಕುಟುಂಭಕ್ಕೆ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಂಡಿಮಕ್ಕಿ ಗ್ರಾಮದ ಪಾಲೆಪಾರೆ ( ಹೂಕಾಡ್ ಪೈಸಾರಿ) ಪಿ.ಎಸ್. ಕಿಶನ್ ದಂಪತಿಗಳಿಗೆ, ಐದನೇಯ ಮನೆ ದಿವಂಗತ ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳ ಮತ್ತು ಅವರ ಮೂವರು ಮಕ್ಕಳ ಕುಟುಂಬಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಇಂದು ಹಸ್ತಾಂತರ ಮಾಡಿರುತ್ತಾರೆ.

ನಾನು ಕಡು ಬಡತನದ ಕುಟುಂಬದಿಂದ ಬಂದ ವ್ಯಕ್ತಿ. ಹಂತ ಹಂತವಾಗಿ ಜೀವನದಲ್ಲಿ ಸಾಧಿಸಿ,

ಎತ್ತರಕ್ಕೆ ಬೆಳೆದು ಬಂದವ.ಆಧುನಿಕತೆಯು ಸರ್ವವ್ಯಾಪ್ತಿಯಾದರು ನಮ್ಮ ಸುತ್ತಮುತ್ತಲಿನ ನಿರ್ಗತಿಕ ಕುಟುಂಬಗಳು ಕೂಲಿ ಜೀವನ ನಡೆಸಿಕೊಂಡು ಸೂರು ಹೊಂದಲು ಹಾತುರಪಡುತ್ತಿರುವುದು ಇಂದಿಗೂ ಜೀವಂತವಾಗಿದೆ. ಇದನ್ನು ಮನಗಂಡು ಗಳಿಕೆಯ ಒಂದು ಭಾಗವನ್ನು ಸೇವಾ ಕಾರ್ಯಕ್ರಮಕ್ಕೆ ವಿನಿಯೋಗ ಮಾಡುವ ಉದ್ದೇಶದಿಂದ ನಿರ್ಗತಿಕ ಕುಟುಂಭವನ್ನು ಆಯ್ಕೆಗೊಳಿಸಿ. ಪ್ರತಿ ಹುಟ್ಟು ಹಬ್ಬ ದಿನದಂದು ನೂತನ ಮನೆ ನಿರ್ಮಾಣ ಮಾಡಿ ಬಡ ಕುಟುಂಬದ ಜೀವನದಲ್ಲಿ ಹೊಸಬೆಳಕು ಮೂಡಿಸುತಿದ್ದೇನೆ. ಪಿ.ಎಸ್. ಮಂಜುಳ ಪತಿ ಕಳೆದುಕೊಂಡು ತನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕುತಿರುವ ಕಾರ್ಮಿಕ ಮಹಿಳೆ ಮಕ್ಕಳ ಭವಿಷ್ಯವನು ಚಿಂತಿಸಿ ಮನೆ ನಿರ್ಮಾಣ ಮಾಡಿ ನೀಡಿದ್ದೇನೆ. ದನಿಕ ವರ್ಗ ಚಿಂತಿಸಿದಲ್ಲಿ ಸೂರಿಲ್ಲದ ಬಡ ಕುಟುಂಬಕ್ಕೆ ಅಲ್ಪ ಮೊತ್ತದಲ್ಲಿ ಮನೆ ನಿರ್ಮಾಣ ಮಾಡಿ ಆಸರೆಯಾಗಬಹುದು ಎಂದು ಗಣೇಶ್ ಹೇಳಿದರು.

ನಾನು ಸತತ 13 ವರ್ಷಗಳೀಂದ ಈ ಸ್ಥಳದಲ್ಲಿ ಕುಟುಂಬದೊಂದಿಗೆ ಗುಡಿಸಲು ಮನೆಯಲ್ಲಿ ವಾಸವಿದ್ದೇನೆ. 8 ತಿಂಗಳ ಹಿಂದೆ ಹೃದಯಾಘಾತದಿಂದ ನನ್ನ ಪತಿ ಸನ್ನಿ ಮೃತಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅತ್ತೆ ಕಾಯಿಲೆಗೆ ತುತ್ತಾಗಿ ನಿಧನರಾದರು. ನನಗೆ 8 ತಿಂಗಳ ಹಸುಗೂಸುನೊಂದಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸರ್ಕಾರ ಮನೆ ನಿರ್ಮಾಣ ಮಾಡಲು ಹಣ 1 ಲಕ್ಷ ಹಣ ಸಹಾಯಧನ ನೀಡಿದ್ದರು. ಆದರೆ ಕಾಯಿಲೆಗೆ ತುತ್ತಾದ ಅತ್ತೆಯ ಆರೈಕೆ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಹಣ ವ್ಯಯವಾಯಿತು. ಉಳಿದ ಹಣದಲ್ಲಿ ಪತಿ ಮತ್ತು ನಾನು ಮನೆಯ ಅಡಿಪಾಯ ನಿರ್ಮಾಣ ಮಾಡಿದ್ದೆವು. ಪತಿ ನಿಧನರಾದ ಬಳಿಕ ಮನೆಯ ಕನಸು ನುಚ್ಚುನೂರಾಯಿತು. ಗುಡಿಸಲು ಮನೆಯಲ್ಲೇ ಕಾಲ ಕಳೆಯುವಂತಾಯಿತು. ಪಿ.ಎಸ್. ಮಧು ಅವರು ಗಣೇಶ್ ಅಣ್ಣ ಸಂಪರ್ಕ ಮಾಡಿ ವಿಷಯ ತಿಳಿಸಿದ್ದರು. ಮನವಿಯ ಮೇರೆಗೆ ಇಂದು ಗಣೇಶ ಅಣ್ಣಾ ಮನೆ ನಿರ್ಮಾಣ ಮಾಡಿ ನನ್ನ ಕುಟುಂಭಕ್ಕೆ ಆಸರೆಯಾಗಿದ್ದಾರೆ ಪಿ.ಎಸ್. ಮನೆ ಪಡೆದುಕೊಂಡ ಮಹಿಳೆ ಮಂಜುಳಾ ಹೇಳಿದರು.

ಇದೇ ಸಂಧರ್ಭದಲ್ಲಿ ಶ್ರೀ ವಿಧ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ ಪೆರುಂಬಾಡಿ ಅಧ್ಯಕ್ಷ ಬಿ.ಎಂ. ರಮೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಡಿ. ನವೀನ್ ಹಾಗೂ ಮನೆ ಪಡೆದುಕೊಂಡ ಕುಟುಂಬದ ವತಿಯಿಂದ ಗಣೇಶ್ ಅವರಿಗೆ ಪೇಟ ತೊಡಿಸಿ ಸನ್ಮಾನಿಸಲಾಯಿತು.

ಬಿ.ಎಂ, ಗಣೇಶ್ ಅವರ ಪತ್ನಿ ಸುಮ, ತಂದೆ ಬಿ.ಆರ್. ಮಂಜಪ್ಪ, ತಾಯಿ ಪಾರ್ವತಿ, ತಮ್ಮ ರಮೇಶ್ ಉದ್ಯಮಿ ಬಿ.ಅರ್, ನಾಗರಾಜ್ (ಚುಪ್ಪ) ಸೇರಿದಂತೆ, ಕಂಡಿಮಕ್ಕಿ ತ್ರಿಮೂರ್ತಿ ಅರ್ಚಕರಾದ ಪಿ.ಕೆ. ಮಧು, ಗ್ರಾಮಸ್ಥರು, ಸ್ನೇಹಿತರು ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1