ಸೋಮವಾರಪೇಟೆ;ಕಾರು ಅಪಘಾತ : ಚಾಲಕ ಪ್ರಾಣಾಪಾಯದಿಂದ ಪಾರು

Jan 31, 2026 - 21:48
Jan 31, 2026 - 21:50
 0  1.8k
ಸೋಮವಾರಪೇಟೆ;ಕಾರು ಅಪಘಾತ : ಚಾಲಕ ಪ್ರಾಣಾಪಾಯದಿಂದ ಪಾರು

ಸೋಮವಾರಪೇಟೆ,ಜ30: ಪಟ್ಟಣದಿಂದ ಶಾಂತಳ್ಳಿಗೆ ತೆರಳುತ್ತಿದ್ದ ಚಾಲಕನ ನಿಯಂತ್ರಣ ಕಾರು ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ರಸ್ತೆಯ ಮಧ್ಯಭಾಗದಲ್ಲಿ ಮಗುಚಿ ಬಿದ್ದ ಘಟನೆ ಶುಕ್ರವಾರ ನಸುಕಿನ ಜಾವ ಸಂಭವಿಸಿದ್ದು, ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಜಕ್ಕನಳ್ಳಿ ಗ್ರಾಮದ ಪ್ರವೀಣ್ ಎಂಬವವರು ಶುಕ್ರವಾರ ಬೆಳಿಗ್ಗೆ ಸಂಬಂಧಿಕರನ್ನು ಸೋಮವಾರಪೇಟೆ ಬಸ್ ನಿಲ್ದಾಣಕ್ಕೆ ಕರೆತಂದು, ವಾಪಸ್ ಹೋಗುವ ಸಂದರ್ಭ ಕಂಬಳ್ಳಿ-ಜೇಡಿಗುಂಡಿ ಮಧ್ಯೆಯ ತಿರುವಿನಲ್ಲಿ ಘಟನೆ ಸಂಭವಿಸಿದೆ.

 ಎದುರು ಭಾಗದಿಂದ ಆಗಮಿಸುತ್ತಿದ್ದ ತಮಿಳುನಾಡು ರಾಜ್ಯದ ನೋಂದಣಿ ಸಂಖ್ಯೆಯಿರುವ ಕಾರು ರಸ್ತೆಯಲ್ಲಿ 'ರಾಂಗ್ ಸೈಡ್' ಬಂದಿದ್ದು, ಮುಖಾಮುಖಿ ಡಿಕ್ಕಿಯನ್ನು ತಪ್ಪಿಸಲು ಹೋದ ಪ್ರವೀಣ್ ಅವರು‌ ನಿಯಂತ್ರಣ ಕಳೆದುಕೊಂಡು ರಸ್ತೆ ಬಲ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಪಡಿಸಿದ್ದಾರೆ.

 ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು, ಕಾರಿನ ಮುಂಭಾಗ ತೀವ್ರ ಜಖಂಗೊಂಡು ತಲೆಕೆಳಗಾಗಿ ಮಗುಚಿ ಬಿದ್ದಿದೆ. ಪ್ರವೀಣ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಂಗ್‌ ಸೈಡ್ ನಲ್ಲಿ ಆಗಮಿಸಿ ಅವಘಡಕ್ಕೆ ಕಾರಣವಾದ ತಮಿಳುನಾಡು ನೋಂದಣಿಯ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೇ ತೆರಳಿದ್ದಾನೆ.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 0
Sad Sad 3
Wow Wow 0