ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಕ್ರೀಡಾಕೂಟಗಳು ಸಹಕಾರಿ:ಶಾಸಕ ಎಎಸ್ ಪೊನ್ನಣ್ಣ

Dec 28, 2025 - 21:41
 0  223
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಕ್ರೀಡಾಕೂಟಗಳು ಸಹಕಾರಿ:ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ, ಐಪಿಎಲ್ ಟಿ-10 ಕ್ರಿಕೆಟ್ ಪಂದ್ಯಾಟದ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಈ ಪಂದ್ಯಾಟದಲ್ಲಿ ಭಾಗವಹಿಸಿದ ತಂಡಗಳಿಗೆ ಶುಭ ಕೋರಿದ ಶಾಸಕರು, ಕ್ರೀಡೆಯಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡು ಉತ್ತಮ ರೀತಿಯ ಫಲಿತಾಂಶ ಬರುವಲ್ಲಿ ಸರ್ವರ ಪ್ರಯತ್ನ ಮುಖ್ಯವಾದದ್ದು. ಕ್ರೀಡೆಯು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಇಂತಹ ಕ್ರೀಡೆಗಳು ಸಹಕಾರಿಯಾಗಲಿದೆ. ಕ್ರೀಡೆಯನ್ನು ಹಾಗೂ ಕ್ರೀಡೆಯಲ್ಲಿ ದೊರಕುವ ಸೋಲು ಗೆಲುವನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸಿ ಉತ್ತಮ ಆಟಗಾರರಾಗಿಂದು ಹಾರೈಸಿದರು.

 ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು, ಕಾರ್ಯಕ್ರಮ ಆಯೋಜಕರು, ತಾಲೂಕು ಅಲ್ಪಸಂಖ್ಯಾತರ ಸದಸ್ಯರು ಕೊಳುಮಂಡ ರಫೀಕ್, ಸದಸ್ಯರು, ಪದಾಧಿಕಾರಿಗಳು, ಮಾಜಿ ಪುರಸಭೆ ಸದಸ್ಯರು ರಾಫಿ, ಮತೀನ್, ಅತಿಫ್ ಮನ್ನ, ಸ್ಥಾಯಿ ಸಮಿತಿ ಅಧ್ಯಕ್ಷರು ಜಲಿಲ್, ಪಕ್ಷದ ಮುಖಂಡರು ನಾಸಿರ್, ಸುಭಾಸ್ ನಾಣಯ್ಯ, ಯುವ ಕಾಂಗ್ರೆಸ್ ಉಪಾಧ್ಯಕ್ಷರು ಅಂಕಿತ್ ಪೊನ್ನಪ್ಪ, ಮೆಲ್ ರೋಯ್ ಲೋಬೊ, ಜಗದೀಶ್, ಬೀನಾ ಜಗದೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0