ಭಾನುವಾರ ಅಮ್ಮತ್ತಿ‌ ಒಂಟಿಯಂಗಡಿ ಶಾಲೆಯಲ್ಲಿ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮ

Apr 17, 2026 - 15:22
 0  253
ಭಾನುವಾರ ಅಮ್ಮತ್ತಿ‌ ಒಂಟಿಯಂಗಡಿ ಶಾಲೆಯಲ್ಲಿ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮ

ಮಡಿಕೇರಿ: ಇದೇ ಭಾನುವಾರ ಏಪ್ರಿಲ್ 19ರಂದು ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಕುಲಬಾಂಧವರಿಗಾಗಿ ಯುಗಾದಿ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾಕೂಟ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರು ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು‌ ಹಮ್ಮಿಕೊಂಡಿದ್ದೇವೆ ಎಂದು ಕಣ್ಣಂಗಾಲ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಣ್ಣಂಗಾಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಒಕ್ಕಲಿಗ ಜನಾಂಗ ಬಾಂಧವರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಕಾರ್ಯಕ್ರಮದ ಯಶಸ್ಸಿಗಾಗಿ ಒಟ್ಟು 12 ಉಪ ಸಮಿತಿಗಳನ್ನು ರಚಿಸಿದ್ದು,ಉಪ ಸಮಿತಿಗಳಿಗೆ ನಿರ್ದೇಶಕರನ್ನೇ ಅಧ್ಯಕ್ಷರಾಗಿ ನೇಮಕ ಮಾಡಿದ್ದೇವೆ.ಏ.19ರ ಭಾನುವಾರ ಬೆಳಗ್ಗೆ ಅಮ್ಮತ್ತಿ 

 ಒಂಟಿಯಂಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ 10ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೊಳೆನರಸೀಪುರ ಚೆಸ್ಕಾಂ ಅಭಿಯಂತರಾದ ಕೆ.ಕೆ ಮೋಹನ್ ಕುಮಾರ್,ವಿರಾಜಪೇಟೆ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಕೆ.ಆರ್ ಸ್ವರೂಪ ಅವರು ಆಗಮಿಸಲಿದ್ದಾರೆ.ಸಂಜೆ ಐದು ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ವಹಿಸಲಿದ್ದು,

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ,ಸಮಾಜ ಸೇವಕ ಹರಪಳ್ಳಿ ರವೀಂದ್ರ,ಮೈಸೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರಾದ ಈ.ಪ್ರಕಾಶ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಕ್ರೀಡಾಕೂಟದಲ್ಲಿ ಆಡಳಿತ ಮಂಡಳಿಯ ತೀರ್ಮಾನದಂತೆ ಕಣ್ಣಂಗಾಲ ಗ್ರಾಮದ ಕುಲಬಾಂಧವರನ್ನು ಮದೆಯಾಗಿರುವ ಹೆಣ್ಣು ಮಕ್ಕಳು ಮತ್ತು ಅವರ ಮಕ್ಕಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದೇವೆ.

ಕಣ್ಣಂಗಾಲ ಒಕ್ಕಲಿಗರ ಸಂಘದ ವ್ಯಾಪ್ತಿಗೆ ಒಳಪಡುವ,ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು,ಅದೇ ರೀತಿಯಲ್ಲಿ ಈ ಹಿಂದಿನ‌ ಆಡಳಿತ ಮಂಡಳಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಗೋಪಾಲಕೃಷ್ಣ ಅವರು‌ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದರು.

ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಸಂಘದ ಕಾರ್ಯದರ್ಶಿ ವಿ.ವಿ ಮಹಾಲಕ್ಷ್ಮಿ ಅವರು, ಪುರುಷರಿಗೆ ವಾಲಿಬಾಲ್,ಬಾಂಬ್ ಇನ್ ದ ಸಿಟಿ,ಮಹಿಳೆಯರಿಗೆ ಥ್ರೋಬಾಲ್, ಬಾಂಬ್ ಇನ್ ದ ಸಿಟಿ,ಬಾಲಕ ಮತ್ತು ಬಾಲಕಿಯರಿಗೆ 4 ರಿಂದ 6ವರ್ಷದವರಿಗೆ 100 ಮೀಟರ್ ಓಟ,7 ರಿಂದ 12ವರ್ಷದವರಿಗೆ 

100ಮೀ ಓಟ 13ರಿಂದ 18 ವರ್ಷದವರಿಗೆ 100 ಮೀ.ಓಟ ಮತ್ತು 1 ರಿಂದ 3 ವರ್ಷದವರೆಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ‌ ನಿರ್ದೇಶಕರಾದ ವಿ.ಸಿ‌ ಕಿರಣ್, ಕೆ.ಪಿ ಅಜಿತ್,ನಿರ್ದೇಶಕಿ ವಿ.ಎಸ್ ಸೌಮ್ಯ ಹಾಗೂ ಸಾಮಾಜಿಕ ಜಾಲತಾಣದ ಸಂಯೋಜಕಿ‌ ವಿ.ಎಸ್ ಪಂಚಮಿ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1