ವಿದ್ಯಾರ್ಥಿಗಳು ಸೌಲಭ್ಯಗಳು ಸದುಪಯೋಗಪಡಿಸಿಕೊಳ್ಳಬೇಕು;ಶಿಕ್ಷಕ ಕೆಪಿ ಜಯಕುಮಾರ್
ಶನಿವಾರಸಂತೆ : ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ಕಾಲಹರಣ ಮಾಡದೇ ಶ್ರದ್ಧೆಯಿಂದ ವಿಧ್ಯಾಭ್ಯಾಸ ಮಾಡಬೇಕು ಎಂದು ಶನಿವಾರಸಂತೆ ಶ್ರೀ ವಿಗ್ನೇಶ್ವರ ಬಾಲಿಕ ಪ್ರೌಢ ಶಾಲಾ ಶಿಕ್ಷಕ ಕೆ. ಪಿ ಜಯಕುಮಾರ್ ಅಭಿಪ್ರಾಯ ಪಟ್ಟರು ಇವರು ಸಮೀಪದ ಮಾಲಂಬಿ ವಾಲ್ಮೀಕಿ ವಸತಿ ಶಾಲೆಯಲ್ಲಿ ಪಡವಲಹಿಪ್ಪೆ ಶ್ರೀ ಹೆಚ್. ಡಿ ದೇವೇಗೌಡ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಹೆಚ್ಚಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದಿವಾಸಿ ಬುಡಕಟ್ಟು ಜನಾಂಗದ ಮದ್ಯದಲ್ಲಿ ಶಿಬಿರ ಆಯೋಜನೆ ಮಾಡಿ ಇವರ ಆಚಾರ ವಿಚಾರ ಹಾಗೂ ಇವರ ಬದುಕಿನ ಸ್ಥಿತಿಗತಿಗಳನ್ನು ಸಮೀಪದಿಂದ ನೋಡಲು ನಿಮಗೆ ನಿಮ್ಮ ಕಾಲೇಜು ಅವಕಾಶ ಒದಗಿಸಿ ಕೊಟ್ಟಿದೆ. ಇದರಿಂದ ಬದುಕು ಇಂದಿಗೂ ಎಷ್ಟು ಕಠಿಣವಾಗಿದೆ ಎಂದು ಗೊತ್ತಾಗಿದೆ.ನೀವು ಸಾಧನೆ ಮಾಡುವ ಮೂಲಕ ಈ ರೀತಿಯ ಅತಿ ಹಿಂದುಳಿದ ಜನಾಂಗದವರ ಸ್ರೇಯಭಿವೃದ್ಧಿಗೆ ಶ್ರಮಿಸಬೇಕು.
ಮಕ್ಕಳಿಗೆ ಗುರಿ ಹಾಗೂ ಅದನ್ನು ತಲುಪಿಸಲು ಮಾರ್ಗದರ್ಶನ ಮಾಡುವ ಗುರು ಹಿಂಭಾಗ ಇರಬೇಕು.ಮಕ್ಕಳು ತಮ್ಮ ತಂದೆ ತಾಯಿಯರ ಕನಸು ನನಸು ಮಾಡಬೇಕು ತಮ್ಮ ತಂದೆ ತಾಯಿಯರು ಹೇಳುವ ಬುದ್ದಿಮಾತಿಗೆ ಕೋಪಗೊಳ್ಳದೆ ನಡೆದುಕೊಂಡರೆ ನಿಮ್ಮ ಗುರಿ ಸುಲಭವಾಗಿ ತಲುಪಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಹಾಸನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಜಯಸ್ವಾಮಿ,ಇಂತಹ ಶಿಬಿರಗಳಲ್ಲಿ ಅನೇಕ ಕಲಿಕೆಗಳನ್ನು ಕಲಿಯಲು ಅವಕಾಶವಿದೆ.ನಾವು ಇಂತಹ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕ ಮಂಜುನಾಥ್ ಮಾತನಾಡಿ ಆದಿವಾಸಿ ಬುಡಕಟ್ಟು ಜನಾಂಗದವರು ಇಂದು ಕಾಡು ಹಾಗೂ ಕಾಡು ಪ್ರಾಣಿಗಳ ಸಂರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ.ಶಿಬಿರಾರ್ಥಿಗಳು ನಿಮ್ಮ ಕೌಶಲ್ಯ ಹಾಗೂ ನಿಮ್ಮ ಜ್ಞಾನವನ್ನು ಇಲ್ಲಿಯ ಸಮುದಾಯದವರೊಂದಿಗೆ ಹಂಚಿಕೊಳ್ಳಿ ಇವರನ್ನು ನೀವು ಹತ್ತಿರವಗಬೇಕು, ನೀವು ಬಂದು ಹೋಗಿರುವ ನೆನಪು ಉಳಿಯುವ ಹಾಗೆ ಮಾಡಿ ಎಂದರು.
ಪ್ರಾಧ್ಯಾಪಕ ನಾಗೇಂದ್ರ ಮಾತನಾಡಿ ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನುವುದಕ್ಕಿಂತ ಮುಖ್ಯವಾಗಿ ನಾವು ಯಾವ ರೀತಿ ಬದುಕಿದ್ದೇವೆ ಹಾಗೂ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ನಾವು ಅರಿತು ಬದುಕಬೇಕು ಎಂದರು.
ಪ್ರಾಧ್ಯಾಪಕ ಉಮೇಶ್ ಮಾತನಾಡಿ ನೈಜ ಪಾಠ ಕಲಿಕೆಗೆ ಇದು ವೇದಿಕೆಯಾಗಿದೆ ನಾವು ನಾಲ್ಕು ಗೋಡೆ ಒಳಗೆ ಕಲಿಯುವ ಪಾಟಕಿಂತ ಹೆಚ್ಚಿನ ಕಲಿಕಾ ಪಾಠ ಇಲ್ಲಿ ಕಲಿಯಬಹುದು, ಇಲ್ಲಿಯ ಜನರೊಂದಿಗೆ ಇಂತಹ ಶಿಬಿರಗಳಲ್ಲಿ ಬೆರೆತು ಅವರೊಳಗೆ ನಾವು ಒಬ್ಬರಗಬೇಕು ಆಗಿದ್ದಾಗ ಮಾತ್ರ ನಾವು ಅವರ ಆಚಾರ ವಿಚಾರ ಕಲಿಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಮಲ್ಲಿಪಟ್ಟಣದ ಗುತ್ತಿಗೆದಾರ ಸುಧೀರ್ ಮಾತನಾಡಿ ನಾನು ಸಹ ಇಂತಹ ಶಿಬಿರಗಳಲಿ ಇದೆ ದೇವೇಗೌಡ ಕಾಲೇಜಿನಿಂದ ಪಾಲ್ಗೊಂಡಿದ್ದೆ ನಾವು ಪಾಲ್ಗೊಂಡ ಶಿಬಿರದ ಗ್ರಾಮಗಳಲ್ಲಿ ಫೋನ್ ನೆಟ್ವರ್ಕ್ ಇರುತ್ತಿರಲಿಲ್ಲ, ನಮ್ಮ ಬದುಕಿನ ಪಾಠ ಇಂತಹ ಶಿಬಿರಗಳು ಕಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರಾದ
ಶ್ರೀ ಅನಂತ್ ಕುಮಾರ್, ದಿವಾಕರ್ , ಶ್ರೀಗುರು, ಡಾ.ಗೌತಮ್, ಕೃಷ್ಣ,ನವೀನ್, ಪ್ರಮುಖರಾದ ಶಶಿ, ಶಿಬಿರ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಡಾ. ಹೆಚ್ ಎನ್. ದೀಪು .ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ರೇಖಾಶ್ರೀ ಮುಂತಾದವರಿದ್ದರು.