ಸುಂಟಿಕೊಪ್ಪ:ಬಸ್ ಮತ್ತು ಕಾರು ನಡುವೆ ಅಪಘಾತ : ಡಿಕ್ಕಿಯ ರಭಸಕ್ಕೆ ಕಿತ್ತು‌ ಬಂದ ಕಾರಿನ ಟೈರ್

Nov 24, 2025 - 21:46
Nov 24, 2025 - 22:09
 0  1.9k
ಸುಂಟಿಕೊಪ್ಪ:ಬಸ್  ಮತ್ತು ಕಾರು ನಡುವೆ ಅಪಘಾತ : ಡಿಕ್ಕಿಯ ರಭಸಕ್ಕೆ ಕಿತ್ತು‌ ಬಂದ ಕಾರಿನ ಟೈರ್

ಸುಂಟಿಕೊಪ್ಪ: ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ಸುಂಟಿಕೊಪ್ಪ ಸಮೀಪದ ಶಾಂತಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ‌.

 ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಪವರ್ ಪ್ಲಸ್ ಬಸ್ ಮತ್ತು ಮಡಿಕೇರಿ ಕಡೆಗೆ ಬರುತ್ತಿದ್ದ ವ್ಯಾಗನರ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಬಲಭಾಗದ ಟಯರ್ ಕಿತ್ತು ರಸ್ತೆ ಬದಿಗೆ ಹಾರಿ ಬಿದ್ದಿದೆ‌. ಅಲ್ಲದೇ ಕಾರಿನ ಮುಂಭಾಗ ಜಖಂಗೊಂಡಿದೆ‌. ಗಾಯಾಳುವನ್ನು ಜಿಲ್ಲಾಸ್ಪತ್ರೆ ಮಡಿಕೇರಿಗೆ ಸಾಗಿಸಲಾಗಿದೆ.

 ಸುಂಟಿಕೊಪ್ಪ ಠಾಣೆಯ ಎಎಸ್ಐ ಸೈಮನ್ ಮತ್ತು ಹೆದ್ದಾರಿ ಗಸ್ತು ಪಡೆಯ ಎಎಸ್ಐ ಶೇಷಪ್ಪ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ. ಕಾರು ಚಾಲಕನ ಅತೀವೇಗ ಮತ್ತು ಅಜಾಗರೂಕತೆಯೇ ಈ ಅಪಘಾತಕ್ಮೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಸಾರೆ. ಅಪಘಾತದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

What's Your Reaction?

Like Like 0
Dislike Dislike 1
Love Love 3
Funny Funny 1
Angry Angry 0
Sad Sad 5
Wow Wow 2