ಮಾರ್ಚ್ 15 ಮತ್ತು16ರಂದು ಮಾಕುಟ್ಟದಲ್ಲಿರುವ ಶ್ರೀ ಕಾಕತೋಡು ದೇವಿ ಕ್ಷೇತ್ರದ ಮಹೋತ್ಸವ

Feb 22, 2026 - 12:48
 0  290
ಮಾರ್ಚ್ 15 ಮತ್ತು16ರಂದು ಮಾಕುಟ್ಟದಲ್ಲಿರುವ ಶ್ರೀ ಕಾಕತೋಡು ದೇವಿ ಕ್ಷೇತ್ರದ ಮಹೋತ್ಸವ
ವಿಜಯ್ ಕುಮಾರ್

ವಿರಾಜಪೇಟೆ:ವಿರಾಜಪೇಟೆ ತಾಲೂಕಿನ ಕರ್ನಾಟಕ ಕೇರಳ ಗಡಿಭಾಗದ ಮಾಕುಟ್ಟದಲ್ಲಿರುವ ಶ್ರೀ ಕಾಕತೋಡು ದೇವಿ ಕ್ಷೇತ್ರದ ಮಹೋತ್ಸವ ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿಜಯಕುಮಾರ್ ತಿಳಿಸಿದರು.

 ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಕಾಕತೋಡು ದೇವಿಯ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುವುದು. ಕೊಡಗು ಜಿಲ್ಲೆಯ ಅಸಂಖ್ಯಾತ ಭಕ್ತಾಧಿಗಳನ್ನು ಅನುಗ್ರಹಿಸುತ್ತಿರುವ ದೇವಿ ಇದಾಗಿದೆ. ಕಾನನದ ನಡುವೆ ಇರುವ ದೇವಾಲಯದಲ್ಲಿ ದೇವಿ ಕಂಗೊಳಿಸುತ್ತಿದ್ದು ರಸ್ತೆಯಲ್ಲಿ ವಾಹನ ಚಲಾಯಿಸುವವ ಅಸಂಖ್ಯ ಭಕ್ತರನ್ನು ದೇವಿ ಸಲಹುತ್ತಿದ್ದಾಳೆ.

 ವರ್ಷಂಪ್ರತಿಯಂತೆ ವಾರ್ಷಿಕ ಹಬ್ಬ ನಡೆಸಲಾಗುತ್ತಿದ್ದು ಮೀನಾ ಮಾಸದ 2,2 ರಂದು ಅಂದರೆ ಮಾ.15,16 ರಂದು ಹಬ್ಬದ ನಿಗದಿಯಾಗಿದೆ ಎಂದರು. ಮಾರ್ಚ್ 15 ರಂದು ಬೆಳಿಗ್ಗೆ 6.30 ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ದೇವಿಗೆ ಅಭಿಷೇಕ, ಗಣಪತಿ ಹೋಮ, ಮಧ್ಯಾಹ್ನದ ಪೂಜೆ, ಸಂಜೆ 5 ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು ನಂತರ ಭಗವತಿ ಸೇವೆ, 6 ಗಂಟೆಗೆ ಸಹಸ್ರ ದೀಪ, ಅಲಂಕಾರ ಪೂಜೆ, 6.30ಕ್ಕೆ ದೇವಿ ಪೂಜೆ, 7.30ಕ್ಕೆ ಪುಷ್ಪಲಂಕಾರ, ರಾತ್ರಿ 8:30ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

 ಮಾ.16 ರಂದು ಬೆಳಿಗ್ಗೆ 6.30 ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ಅಭಿಷೇಕ, ಗಣಪತಿ ಹೋಮ, ಉಷಾ ಪೂಜೆ, ನವಕ ಪೂಜೆ, ಕಲಶಾಭಿಷೇಕ, ಮಧ್ಯಾಹ್ನದ ಪೂಜೆ ನಡೆಯಲಿದೆ. ಸಂಜೆ 5 ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ಭಗವತಿ ಸೇವೆ 6 ಗಂಟೆಗೆ ಸರ್ಪ ಬಲಿ, ರಾತ್ರಿ 8 ಗಂಟೆಗೆ ರಾತ್ರಿ ಪೂಜೆ,8.30ಕ್ಕೆ ತಾಲ ಪೋಲಿ ಮೆರವಣಿಗೆಯ ಸ್ವೀಕಾರ, ಮತ್ತು ಗುರುತಿ ಪೂಜೆ ನಡೆಯಲಿದೆ.

 ಎರಡು ದಿನಗಳ ಕಾಲ ಉತ್ಸವ ನಡೆಯಲಿದ್ದು ಎರಡು ದಿನವೂ ಅನ್ನ ಸಂತರ್ಪಣೆ ನಡೆಯಲಿದೆ. ಪೂಜಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ಅಧ್ಯಕ್ಷ ರಾಧಕೃಷ್ಣ, ಉಪಾಧ್ಯಕ್ಷರಾದ ವಿಜಯಕುಮಾರ್ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0