ಜುಲೈ 09ರಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ವಿಪ್ರ ಸಭಾ ಭವನ ಲೋಕಾರ್ಪಣೆ

Jul 7, 2026 - 16:43
Jul 7, 2026 - 16:44
 0  102
ಜುಲೈ 09ರಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ವಿಪ್ರ ಸಭಾ ಭವನ ಲೋಕಾರ್ಪಣೆ

ಗೋಣಿಕೊಪ್ಪ: ಒಂದು ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ವಿಪ್ರ ಸಭಾ ಭವನ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಮಾಹಿತಿ ನೀಡಿದರು.

ಕೈಕೇರಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೯ ರಂದು ಬೆಳಗ್ಗೆ ೧೦.೩೦ಕ್ಕೆ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೂತನ ಸಭಾಭವನ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ಜತೆಗೆ ವಿಪ್ರ ಯುವ ಸಂಘದ ಅನ್ನಪೂರ್ಣ ಭೋಜನ ಶಾಲೆಯನ್ನು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ. ಎಸ್ ಪೊನ್ನಣ್ಣ ಉದ್ಘಾಟಿಸಲಿದ್ದಾರೆ.

ಬಾಳೆ ಕುಂದ್ರು ಶ್ರೀಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ವಾಸದೇವ ಸದಾಶಿವಾಶ್ರಮದ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ವಿಪ್ರ ಯುವ ಸಂಘದ ಸ್ಥಾಪಕ ಕಾರ್ಯದರ್ಶಿ ರಾಜೇಶ್ ನೂರಿತ್ತಾಯ ಉಪಸ್ಥಿತಿಯಲ್ಲಿರಲಿದ್ದಾರೆ.

ನಂತರ ಮಧ್ಯಾಹ್ನ ೨ ಗಂಟೆಗೆ ನಡೆಯುವ ವಿಪ್ರ ಬಾಂಧವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಸಭಾಧ್ಯಕ್ಷ ಕೆ. ಜಿ. ಬೋಪಯ್ಯ, ಮಾಜಿ ಎಂ.ಎಲ್.ಸಿ ಮಂಡೇಪಂಡ ಸುನಿಲ್ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಭಾಗವಾಗಿ ಜುಲೈ ೮ ರಂದು ಸಂಜೆ ೬ ಗಂಟೆಗೆ ವಾಸ್ತು ಹೋಮ, ರಾಕ್ಷೆಘ್ನ ಹೋಮ, ಮಹಾ ಸುದರ್ಶನ ಹೋಮ, ದುರ್ಗಾ ನಮಸ್ಕಾರ ಪೂಜೆ ನೆರವೇರಲಿದೆ. 

೯ ರಂದು ಬೆಳಗ್ಗೆ ೬.೩೦ ಗಂಟೆಗೆ ಮಹಾ ಗಣಪತಿ ಹೋಮ, ೮ ಕ್ಕೆ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಮ. ೨ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ೩.೩೦ ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

   ಮುಂದುವರೆದು ಮಾತನಾಡಿದ ಅವರು, ೧೯೮೩ರಲ್ಲಿ ರಮಣಶರ್ಮ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪನೆ ಮಾಡಲಾಗಿದ್ದು, ಹಿರಿಯ ವಿಪ್ರ ಬಾಂಧವರ ಅವಿರತ ಶ್ರಮದಿಂದ ನಿವೇಶನ ಖರೀದಿಸಿ ೨೦೧೬ರಲ್ಲಿ ವಿಪ್ರ ಸಭಾ ಭವನ ಹೆಸರಿನಲ್ಲಿ ಉದ್ಘಾಟಿಸಲಾಯಿತು. 

೨೦೨೪ರಲ್ಲಿ ಹೊಸ ತಂಡ ಆಡಳಿತ ವಹಿಸಿಕೊಂಡು ಸುಸಜ್ಜಿತ ಸಭಾ ಭವನ ಇಲ್ಲದೆ ಇರುವುದನ್ನು ಪರಿಗಣಿಸಿ ವಿಪ್ರ ಸಭಾ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅದರ ಕನಸು ನನಸಾಗಿದೆ ಎಂದು ಹೇಳಿದರು.

   ಸಂಸದ ಯದುವೀರ್ ಒಡೆಯರ್ ೨೦ ಲಕ್ಷ ಅನುದಾನ ಒದಗಿಸಿಕೊಟ್ಟಿದ್ದು ಮತ್ತಷ್ಟು ಅನುದಾನವನ್ನ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

  ವಿಪ್ರ ಬಾಂಧವರ ಧನ ಸಹಕಾರದಿಂದ ಸಭಾ ಭವನ ನಿರ್ಮಿಸಲಾಗಿದೆ. ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರುಗಳು ಅನುದಾನ ನೀಡುವುದಾಗಿ ಭರವಸೆ ನೀಡಿದಾರೆ. ಜೊತೆಗೆ ವಿಪ್ರ ಸಮಾಜದವರು ಮತ್ತಷ್ಟು ಸಹಕಾರ ನೀಡಿದಲ್ಲಿ ಸಂಘದ ನೂತನ ಕಟ್ಟಡದಲ್ಲಿ ವಿಶ್ರಾಂತಿ ಗೃಹ, ವಿಸ್ತಾರವಾದ ಅಡುಗೆ ಕೋಣೆ, ಕಚೇರಿಗಳನ್ನು ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದರು.

  ಸುದ್ದಿಗೋಷ್ಠಿಯಲ್ಲಿ ಗೌ. ಅಧ್ಯಕ್ಷ ಶ್ರೀಪತಿ ಪಡಂತ್ತಾಯ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆದಿಲಾಯ, ಉಪಾಧ್ಯಕ್ಷ ಮೋಹನ್ ನಲ್ಲೂರಾಯ, ಕೋಶಾಧಿಕಾರಿ ಪವನ್ ಕಂಡಿಪಾಡಿತ್ತಾಯ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0