ಬೇಲ್ ಮೇಲೆ ಬಂದಿದ್ದ ಆರೋಪಿಯ ಬರ್ಬರ ಹತ್ಯೆ!

Aug 9, 2025 - 12:29
 0  932
ಬೇಲ್  ಮೇಲೆ ಬಂದಿದ್ದ ಆರೋಪಿಯ ಬರ್ಬರ ಹತ್ಯೆ!
ಕೊಲೆಯಾದ ವ್ಯಕ್ತಿ

ಚಿಕ್ಕಮಗಳೂರು:ಬೇಲ್ ಮೇಲೆ ಬಂದಿದ್ದ ಆರೋಪಿಯಯನ್ನು ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ‌ ನಡೆದಿದೆ.ಚರಣ್ (31) ಮೃತ ದುರ್ದೈವಿ.ವರ್ಷದ ಹಿಂದೆ ಪತ್ನಿಯನ್ನು ಕೊಂದು ಜೈಲು ಸೇರಿದ್ದ ಚರಣ್,ತಿಂಗಳ ಹಿಂದೆ ಬೇಲ್ ಆಗಿ ಜೈಲಿನಿಂದ ಹೊರಬಂದಿದ್ದ,ಇಂದು ನಡುರಸ್ತೆಯಲ್ಲಿ ಲಕ್ಕವಳ್ಳಿಯಲ್ಲಿ ಕೊಲೆಯಾಗಿದ್ದಾನೆ. ಹೆಂಡತಿ ತಮ್ಮನ ಮೇಲೆ ಅನುಮಾನ, ಆತನೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 1
Angry Angry 0
Sad Sad 2
Wow Wow 0