ಕ್ಷುಲ್ಲಕ ಕಾರಣಕ್ಕೆ ವಾಹನ ತಡೆದು ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ: ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿಗಳಿಬ್ಬರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ
ವಿರಾಜಪೇಟೆ: ಕ್ಲುಲ್ಲಕ ಕಾರಣ ಮನೆಗೆ ತೆರಳುತಿದ್ದ ವಾಹನ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆಗೆ ಸಂಭಂದಿಸಿದಂತೆ ವಿರಾಜಪೇಟೆ 2ನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿಗಳಾದ ಮಾಳೇಟಿರ ಸುರೇಶ್ (56 ವರ್ಷ)ಮತ್ತು ಪಟ್ಟಡ ಕಾರ್ಯಪ್ಪ (57 ವರ್ಷ) ನ್ಯಾಯಾಲಯದ ಶಿಕ್ಷಿಗೆ ಗುರಿಯಾದ ವ್ಯಕ್ತಿಗಳು.
ಘಟನೆಯ ವಿವರ:
20-05-2016 ರಂದು ವಿರಾಜಪೇಟೆ ನಗರದ ಗೋಣಿಕೊಪ್ಪಲು ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸೆರಿನಿಟಿ ಕಲ್ಯಾಣ ಮಂಟದಲ್ಲಿ ಮದುವೆ ಸಮಾರಂಭವಿತ್ತು. ಮದುವೆ ಸಮಾರಂಭಕ್ಕೆ ಆಗಮಿಸಿದ ವ್ಯಕ್ತಿಗಳು ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಗೊಳಿಸಿದ್ದರು. ಮುಖ್ಯ ರಸ್ತೆಯಿಂದ ವಿಜಯ ನಗರಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಪ್ರಕರಣದ ಆರೋಪಿಗಳ ವಾಹನ ನಿಲುಗಡೆಗೊಂಡಿತ್ತು.ಸಂಜೆ ವೇಳೆಗೆ ತಮ್ಮ ಮನೆಗೆ ತೆರಳುತಿದ್ದ ಎನ್.ಡಿ ಅನೀಲ್ ಕುಮಾರ್ (ಪ್ರಾಯ 55 ವರ್ಷ) ಶುಂಠಿ ವ್ಯಾಪಾರಿ ಮತ್ತು ವಿದ್ಯುತ್ ಗುತ್ತಿಗೆದಾರ ರಾಜೇಶ್ ಎಂ.ಬಿ. ಅವರುಗಳು ವಾಹನದಲ್ಲಿ ಬಂದಿದ್ದಾರೆ. ಮಾರ್ಗಕ್ಕೆ ಅಡ್ಡಲಾಗಿ ನಿಲುಗೆಡೆಗೊಳಿಸಲಾಗಿದ್ದ ವಾಹನವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ವಾಹನ ತೆರವುಗೊಳಿಸಲು ಮುಂದಾಗದ ಆರೋಪಿಗಳು ಮಲಯಾಳಿಕಾರ ಎಂದು ಸಂಭೋದಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅನಿಲ್ ಕುಮಾರ್ ಮತ್ತು ರಾಜೇಶ್ ಅವರುಗಳು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಕಾರದಿಂದ ತಕ್ಷಣವೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಗಾಯಳುಗಳು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರದ 21/05/2016 ರಲ್ಲಿ ಮಾಳೇಟಿರ ಸುರೇಶ್ ಮತ್ತು ಪಟ್ಟಡ ಕಾರ್ಯಪ್ಪ ಅವರುಗಳ ಮೇಲೆ ಜೀವಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಐ.ಪಿ.ಸಿ 341,324,326,504,ಮತ್ತು 506 ರೆ /ಡಬ್ಲಯು, 34 ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗುತ್ತದೆ. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುತ್ತದೆ. ಪ್ರಧಾನ ಸಿವಿಲ್ ನ್ಯಾಯಾಧಿಶರು ಜೆ.ಎಂ.ಎಫ್.ಸಿ ವಿರಾಜಪೇಟೆ ನ್ಯಾಯಲಯದಲ್ಲಿ ಎರಡು ವರ್ಷಗಳು ದಾವೆ ನಡೆದು ಪ್ರಕರಣದ ಆರೋಪಗಳು ಸಾಭಿತಾದ ಹಿನ್ನಲೆಯಲ್ಲಿ 08/07/2019 ರಲ್ಲಿ ಮಾನ್ಯ ನ್ಯಾಯಾಧೀಶರು ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 14 ಸಾವಿರ ದಂಡ ವಿಧಿಸಿ ತೀರ್ಪು ನೀಡಿತು.
ಸದ್ರಿ ನ್ಯಾಯಾಲಯದ ತೀರ್ಪಿನ ವಿರುದ್ದ ಆರೋಪಿಗಳು 2 ನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ ಮನವಿ ಸಲ್ಲಿಸುತ್ತಾರೆ. ಪ್ರಸ್ತುತ ನ್ಯಾಯಾಲಯದಲ್ಲಿ ಸುಮಾರು 06 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಧಾನ ಸಿವಿಲ್ ನ್ಯಾಯಾಧಿಶರು ನೀಡಿರುವ ತೀರ್ಪುನ್ನು ಎತ್ತಿಹಿಡಿದು ಆರೋಪಿಗಳ ಮೇಲ್ ಮನವಿಯನ್ನು ವಜಗೊಳಿಸಿ ಆರೋಪಿಗಳಿಗೆ ನೀಡಿರುವ ಶಿಕ್ಷೆಯನ್ನು ಧೃಡಪಡಿಸಿತು. 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌ. ನ್ಯಾಯಾಧೀಶರಾದ ಎಸ್.ನಟರಾಜ್ ಅವರು ತಾ. 07/08/2025 ರಂದು ಪ್ರಕರಣದ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 14 ಸಾವಿರಾ ದಂಡ ವಿಧಿಸಿ ತೀರ್ಪು ನೀಡಿದರು. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರು ವಾದಿಸಿದರು. ವರದಿ:ಕಿಶೋರ್ ಕುಮಾರ್ ಶೆಟ್ಟಿ