ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿ.ಸಿ.ಫಾರಂನಲ್ಲಿ ಡಿ.5ರಿಂದ 7ರವರೆಗೆ ಮೂರು ದಿನಗಳ ಕೃಷಿ ಮೇಳ-2025

Dec 1, 2025 - 15:09
 0  186
ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿ.ಸಿ.ಫಾರಂನಲ್ಲಿ ಡಿ.5ರಿಂದ 7ರವರೆಗೆ ಮೂರು ದಿನಗಳ ಕೃಷಿ ಮೇಳ-2025

ಮಡಿಕೇರಿ: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿ.ಸಿ.ಫಾರಂನಲ್ಲಿ ಡಿ.5ರಿಂದ 7ರವರೆಗೆ ಮೂರು ದಿನಗಳ ಕಾಲ ಸಮಗ್ರ ಕೃಷಿಯಿಂದ ಸುಸ್ಥಿರತೆ ಘೋಷವಾಕ್ಯದಡಿ ಕೃಷಿ ಮೇಳ-2025 ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ತಿಳಿಸಿದ್ದಾರೆ.

 ಈವರೆಗೆ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಕೃಷಿ ಮೇಳ ನಡೆಸಲಾಗುತ್ತಿತ್ತು. ಮಂಡ್ಯ ಕೃಷಿ ವಿಜ್ಞಾನ ವಿವಿ ಸ್ಥಾಪನೆ ಬಳಿಕ ಇದೇ ಮೊದಲ ಬಾರಿಗೆ ಕೃಷಿ ಮೇಳ ಸಂಘಟಿಸಲಾಗಿದೆ. ಈ ಮೇಳದಲ್ಲಿ ಕೃಷಿಗೆ ಸಂಬAಧಿಸಿದ ವಿನೂತನ ತಂತ್ರಜ್ಞಾನ, ಹೊಸ ತಳಿಗಳು, ಸಂಕರಣ ತಳಿಗಳು, ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ, ದೇಸಿ ರಾಸುಗಳ ಪ್ರದರ್ಶನ, ಹೈಟೆಕ್ ತೋಟಗಾರಿಕೆ, ಡ್ರೋನ್ ತಂತ್ರಜ್ಞಾನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಣೆ ಮುಂತಾದವುಗಳು ವಿಶೇಷ ಆಕರ್ಷಣೆಗಳಾಗಿವೆ. ಯುವ ಪೀಳಿಗೆಯನ್ನು ಆಕರ್ಷಿಸಲು ನವೋದ್ಯಮಗಳ ಪರಿಚಯವೂ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಸೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೃಷಿ ವಿದ್ಯಾಲಯಗಳು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಧೀನದಲ್ಲಿಬರಲಿದೆ. ಹೀಗಾಗಿ ಅಷ್ಟು ಜಿಲ್ಲೆಗಳ ರೈತರ ಅಭಿವೃದ್ಧಿಗೆ ಮಂಡ್ಯ ಕೃಷಿ ವಿವಿ ಶ್ರಮಿಸಲಿದೆ ಎಂದರು. ಡಿ.6,7 ರಂದು ಕೃಷಿಮೇಳಕ್ಕೆ ತೆರಳಲು ಕೃಷಿ ಇಲಾಖೆಯಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ರೈತರು 8884525995, 7892593258 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಪ್ರಶಾಂತ್, ಡಾ.ಲತಾ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0