ಶೌಚಾಲಯದ ಗುಂಡಿ ಕುಸಿದು ಇಬ್ಬರು ಸಾವು: ಪ್ರಾಣ ಉಳಿಸಲು ಹೋದವನ ಪ್ರಾಣವೇ ಹೋಯಿತು

Aug 10, 2026 - 23:17
 0  1.1k
ಶೌಚಾಲಯದ ಗುಂಡಿ ಕುಸಿದು ಇಬ್ಬರು ಸಾವು:  ಪ್ರಾಣ ಉಳಿಸಲು ಹೋದವನ ಪ್ರಾಣವೇ ಹೋಯಿತು

ಸೋಮವಾರಪೇಟೆ:ಆಕಸ್ಮಿಕವಾಗಿ ಕುಸಿದ ಶೌಚಾಲಯದ ಗುಂಡಿಯೊಳಗೆ ಬಿದ್ದು ಇಬ್ಬರು ಅಸು ನೀಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟ (ಗರಗಂದೂರು ಬಿ ಗ್ರಾಮ) ದಲ್ಲಿ ನಡೆದಿದೆ.ಅಕ್ಕಪಕ್ಕದ ಮನೆಯವರಾದ ಜನಾರ್ಧನ ಹಾಗೂ ನಿತ್ಯ ಎಂಬಿಬ್ಬರು ಮೃತ ದುರ್ದೈವಿಗಳು.

 ಸೋಮವಾರ ಸಂಜೆ ನಿತ್ಯರವರು ಮನೆಯ ಸಮೀಪವಿದ್ದ ಹಳೇ ಶೌಚಾಲಯದ ಗುಂಡಿ ಬಳಿಗಾಗಿ ಬರುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಗುಂಡಿ ಕುಸಿದಿದೆ. ಅದರ ಒಳಗೆ ಸಿಲುಕಿದ ಅವರನ್ನು ರಕ್ಷಿಸಲು ಧಾವಿಸಿ ಬಂದ ನೆರೆಮನೆಯವರಾದ ಜನಾರ್ಧನರವರು ಗುಂಡಿಗೆ ಇಳಿದಿದ್ದಾರೆ.

ಈ ಸಂದರ್ಭ ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದ ಪರಿಣಾಮ ಉಸಿರುಗಟ್ಟಿ ಇಬ್ಬರೂ ಉಸಿರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಮೃತದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಡಿಕೇರಿ ಶಾಸಕ ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0