ಲೋಕಕಲ್ಯಾಣಾರ್ಥ ವಾಸವಿ ಮಾತೆ ಅಗ್ನಿ ಪ್ರವೇಶ; ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ವಿಶ್ವರೂಪ ದರ್ಶನ

Jan 17, 2026 - 12:51
 0  263
ಲೋಕಕಲ್ಯಾಣಾರ್ಥ ವಾಸವಿ ಮಾತೆ ಅಗ್ನಿ ಪ್ರವೇಶ; ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ವಿಶ್ವರೂಪ ದರ್ಶನ

ಕುಶಾಲನಗರ ಜ 17; ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿಯು ಲೋಕಕಲ್ಯಾಣಾರ್ಥ ಅಗ್ನಿ ಪ್ರವೇಶ ಮಾಡಿರುವುದಾಗಿ ಪುರಾಣಗಳು ಹೇಳುತ್ತವೆ. ಅಂತಹ ಪುಣ್ಯ ದಿನವನ್ನು ಆರ್ಯವೈಶ್ಯರು ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆಯನ್ನು ನೆರವೇರಿಸಿ ಆಚರಿಸುವುದು ವಾಡಿಕೆ ಎಂದು ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ತಿಳಿಸಿದ್ದಾರೆ.

 ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಾಸವಿ ದೀಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಜನವರಿ 20 ನೇ ತಾರೀಖು ಮಂಗಳವಾರ ವಾಸವಿ ಮಾತೆಯು ವಿಶ್ವರೂಪ ದರ್ಶನ ನೀಡುವ ಪುಣ್ಯ ದಿನ. ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಅಂದು ವಿಶೇಷ ಹೋಮ ಹವನ ನೆರವೇರಿಸಲಾಗುತ್ತದೆ ಎಂದರು.

ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ಬಿ.ಎಲ್.ಸತೀಶ್ ಮಾತನಾಡಿ, 5 ದಿನಗಳ ಕಾಲ ವಾಸವಿ ದೀಕ್ಷೆಯನ್ನು ಸ್ವೀಕರಿಸಿ, ಅಯ್ಯಪ್ಪ ಮಾಲಾಧಾರಿಗಳ ರೀತಿಯಲ್ಲಿ ವೃತ್ತವನ್ನು ಆಚರಿಸಿ, 19ನೇ ತಾರೀಖು ಸೋಮವಾರ ಕಟ್ಟು ಕಟ್ಟುತ್ತೇವೆ. ಕಟ್ಟು ತಲೆಯ ಮೇಲೆ ಹೊತ್ತುಕೊಂಡು ಮಾಲಾಧಾರಿಗಳು ನಗರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಮರಳಿ ನಮ್ಮ ದೇವಸ್ಥಾನಕ್ಕೆ ಬಂದು ಪೂಜೆ, ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ಮಾತನಾಡಿ, ಮಾಘ ಮಾಸದ ಶುಕ್ಲ ಪಕ್ಷದ ಬೀದಿಗೆಯಂದು ಬೆಳ್ಳಿಗೆ 6 ಗಂಟೆಗೆ ಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾಗಣಪತಿ, ನವಗ್ರಹ, ಮೃತಂಜಯ, ಆಯುಷ್ಯ, ಪರಿವಾರ ದೇವತೆಗಳ ಮತ್ತು ವಾಸವಿ ಮೂಲ ಮಂತ್ರಗಳ ಹೋಮ, ಜನಾಂಗದ 102 ಗೋತ್ರದ ಹೋಮ, ತದನಂತರ ಪೂರ್ಣಾಹುತಿಯಾದ ನಂತರದಲ್ಲಿ ದೇವರಿಗೆ ಮಹಾಮಂಗಳಾರತಿ ನಡೆಯಲಿದೆ.

 ಸಂಧ್ಯಾಕಾಲದಲ್ಲಿ ವಾಸವಿ ದೀಕ್ಷಾರ್ಥಿಗಳು ಮ್ಯಾಲೆ ತೆಗೆಯಲಿದ್ದಾರೆ ಎಂದು ತಿಳಿಸಿದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ವಾಸವಿ ದೀಕ್ಷಾ ಸಮಿತಿಯ ಖಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್.ರಮೇಶ್, ಎಸ್.ಎಂ.ಸತೀಶ್, ವಿ.ಆರ್. ಮಂಜುನಾಥ್, ಕೆ.ಎಸ್.ನಾಗೇಶ್, ನಾಗಮಣಿ ಇತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0