ವಿರಾಜಪೇಟೆ; ಮಾರ್ಚ್ 17ರಿಂದ 19ರವರೆಗೆ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ವತಿಯಿಂದ 82ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ
ವಿರಾಜಪೇಟೆ: ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನ ಇವರ ವತಿಯಿಂದ 82ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಮಾರ್ಚ್ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಮಾ. 17ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ 8:45 ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ 5 ಗಂಟೆಗೆ ಮುತ್ತಪ್ಪ ವೆಳ್ಳಾಟಂ ನಡೆಯಲಿದೆ.
6 ಗಂಟೆಗೆ ನೂತನವಾಗಿ ನಿರ್ಮಿಸಿದ ಭಜನಾ ಮಂದಿರದ ಉದ್ಘಾಟನೆ ನೆರವೇರಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ. ಮಾ. 18 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ದೇವರ ಮಲೆ ಇಳಿಸುವುದು, ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟ ನಡೆಯಲಿದೆ.
ಸಂಜೆ 5:30 ಗಂಟೆಗೆ ಮೊದಕಲಶದೊಂದಿಗೆ ತಾಲಪೋಲಿ ಮೆರವಣಿಗೆ, ಕಾಳಿಂಗ ಕಲಾ ಸಮಿತಿಯವರ ಸಿಂಗಾರಿ ಮೇಳ ಹಾಗೂ ತತ್ವಮಸಿ ಸಹಸ್ರ ವೆಳಕಾಟ್ಟಂ ಚಂಡೆಮೇಳದೊಂದಿಗೆ, ಮಹಿಳೆಯರ ತಾಲಪ್ಪೊಲಿ ಮೆರವಣಿಗೆಯು ತೆಲುಗರ ಬೀದಿಯಿಂದ ಹೊರಟು, ಮುಖ್ಯ ಬೀದಿಗಾಗಿ 8 ಗಂಟೆಗೆ ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ ತಲುಪಲಿದೆ.
ಸಂಜೆ 6 ಗಂಟೆಯಿಂದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಭಾಗವಹಿಸಲಿದ್ದಾರೆ ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ಮಾ.19 ರಂದು ಗುರುವಾರ ಪ್ರಾತಃಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, 4 ಗಂಟೆಗೆ ತಿರುವಪ್ಪನ್, ಬೆಳಿಗ್ಗೆ 8 ಗಂಟೆಗೆ ಭಗವತಿ(ಪೋದಿ), 10 ಗಂಟೆಗೆ ವಸೂರಿಮಾಲ, 11 ಗಂಟೆಗೆ ವಿಷ್ಣುಮೂರ್ತಿ, 12 ಗಂಟೆಗೆ ಅನ್ನ ಸಂತರ್ಪಣೆ ಅಪರಾಹ್ನ 3 ಗಂಟೆಗೆ ವಿಷ್ಣುಮೂರ್ತಿ ವಾರಣದೊಂದಿಗೆ 2026 ನೇ ಸಾಲಿನ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.