ವಿರಾಜಪೇಟೆ: ವಾಹನದಲ್ಲೇ ಮಲಗಿದ್ದ ಭತ್ತ ಕೊಯ್ಲು ಯಂತ್ರದ ಚಾಲಕ ಮೃತ್ಯು

Nov 27, 2025 - 12:32
 0  1.6k
ವಿರಾಜಪೇಟೆ: ವಾಹನದಲ್ಲೇ ಮಲಗಿದ್ದ ಭತ್ತ ಕೊಯ್ಲು ಯಂತ್ರದ ಚಾಲಕ ಮೃತ್ಯು

ವಿರಾಜಪೇಟೆ:ವಾಹನದಲ್ಲಿ ತಂಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಹೊರವಲಯದ ಬಿಟ್ಟಂಗಾಲದಲ್ಲಿ ನಡೆದಿದೆ. ಕಳೆದ ರಾತ್ರಿ ತನ್ನ ವಾಹದಲ್ಲೇ ಮಲಗಿದ್ದ ತಮಿಳುನಾಡಿನ ಪೊಳ್ಳಾಚಿಯ ಶಿವಗಂಗೆ ನಿವಾಸಿ ರಮೇಶ್(48)ಮೃತ ಪಟ್ಟ ವ್ಯಕ್ತಿ.

 ಮೂರು ದಿನಗಳ ಹಿಂದೆ ಬಿಟ್ಟಂಗಾಲದ ಪ್ರದೇಶದ ಗದ್ದೆ ಕೊಯ್ಲು ಕೆಲಸಕ್ಕೆ ಆಗಮಿಸಿದ್ದರು. ರಮೇಶ್ ಭತ್ತ ಕೊಯ್ಲು ಯಂತ್ರದ ಚಾಲಕ ಹಾಗೂ ನಿರ್ವಹಕನಾಗಿ ಕೆಲಸ ಮಾಡುತ್ತಿದ್ದನು. ವಿರಾಜಪೇಟೆ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 6
Wow Wow 0