ವಿರಾಜಪೇಟೆ:ಫುಟ್ಬಾಲ್ ಪಂದ್ಯದಲ್ಲಿ ಹೊಡೆದಾಟ

Nov 23, 2025 - 23:58
Nov 24, 2025 - 00:13
 0  3.5k

ವಿರಾಜಪೇಟೆ: ಇಲ್ಲಿನ ತಾಲ್ಲೂಕು ಮೈದಾನದಲ್ಲಿ ನಡೆಯುತ್ತಿರುವ ದಿ. ಎ.ಕೆ ಸುಬ್ಬಯ್ಯ ಸ್ಮರಣಾರ್ಥ ಕಲ್ಲುಬಾಯ್ಸ್ ಆಯೋಜಿಸಿರುವ ರಾಷ್ಟ್ರ ಫುಟ್ಬಾಲ್ ಪಂದ್ಯಾವಳಿಯ ಭಾನುವಾರ ಎರಡನೇ ಸೆಮಿಫೈನಲ್ ಪಂದ್ಯದ ಮುಕ್ತಾಯಗೊಂಡ ಬಳಿಕ ಎರಡು ತಂಡಗಳ ಅಭಿಮಾನಿಗಳ ನಡುವೆ ಪರಸ್ಪರ ಹೊಡೆದಾಡಿರುವ ಘಟನೆ ನಡೆದಿದೆ.

ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಕಡಂಗ ತಂಡ ಸೋಲು ಕಂಡಿತ್ತು. ಈ ಸಂದರ್ಭದಲ್ಲಿ ವಿರಾಜಪೇಟೆ ತಂಡದ ಅಭಿಮಾನಿಯೊಬ್ಬ ಕಡಂಗ ತಂಡದ ಸಪೋಟರ್ಸ್ ಕುಳಿತುಕೊಂಡಿರುವ ಜಾಗದಲ್ಲಿ ಸಂಭ್ರಮಾಚರಣೆ ವೇಳೆಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ಅದಲ್ಲದೇ ಪರಸ್ಪರ ಕುರ್ಚಿಗಳನ್ನು ಬಿಸಾಡಿ ಹೊಡೆದಾಟ ನಡೆಸಿದ್ದಾರೆ. ಇದೀಗ ವಿರಾಜಪೇಟೆ ‌ನಗರ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 3
Dislike Dislike 3
Love Love 3
Funny Funny 4
Angry Angry 2
Sad Sad 4
Wow Wow 3