ವಿರಾಜಪೇಟೆ: ಪುರಸಭೆ ವ್ಯಾಪ್ತಿಯಲ್ಲಿ ನೂತನ 9 ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ

Mar 30, 2026 - 13:43
 0  215
ವಿರಾಜಪೇಟೆ: ಪುರಸಭೆ ವ್ಯಾಪ್ತಿಯಲ್ಲಿ ನೂತನ 9 ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ

ವಿರಾಜಪೇಟೆ:ಪುರಸಭೆ ವ್ಯಾಪ್ತಿಯ ವಾರ್ಡ್ # 9 ರಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ರೂ 65ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ 9 ನೂತನ ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದರು.

ಸುಭಾಷ್ ನಗರ, ಸಿಲ್ವಾನಗರ ಹಾಗೂ ವಿದ್ಯಾನಗರ ವಾರ್ಡ್ ವ್ಯಾಪ್ತಿಯಲ್ಲಿ ಈ ರಸ್ತೆಗಳು ನಿರ್ಮಾಣಗೊಂಡಿದ್ದು, ಉದ್ಘಾಟನೆ ಸಂದರ್ಭ ಸಾರ್ವಜನಿಕರು ಹಾಗೂ ಪ್ರಮುಖರು ಉಪಸ್ಥಿತರಿದ್ದು ಶಾಸಕರಿಗೆ ಮನಪೂರ್ವಕ ಧನ್ಯವಾದಗಳನ್ನರ್ಪಿಸಿದರು

. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ರಂಜಿ ಪೂಣಚ್ಚ, ಮಹಿಳಾ ಅಧ್ಯಕ್ಷೆ ನಯನ,ಪುರಾಸಭೆ ಮಾಜಿ ಸದಸ್ಯರು ರಾಫಿ, ರಾಜೇಶ್, ಬೆನ್ನಿ ಆಗಷ್ಟಿನ್, ರಜಿನಿಕಾಂತ್, ಅತಿಫ್ ಮನ್ನ, ಜಿಲ್ಲಾ ಅಲ್ಪಸಂಖ್ಯಾತರ ಘಟಕದಅಧ್ಯಕ್ಷರುಹನೀಫ್, ತಾಲೂಕು ಅಧ್ಯಕ್ಷರು ರಫೀಕ್, ಸ್ಥಾಯಿ ಸಮಿತಿಯ ಅಧ್ಯಕ್ಷರು ಜಲಿಲ್, ಸಲಾಂ, ಸೂರಜ್ ಹೊಸೂರ್, ಜೋಕಿಮ್, ಮಂಜುನಾಥ್, ಕುಂಡಚ್ಚಿರ ಮಂಜು ದೇವಯ್ಯ, ಅನಿಲ್, ಚೆಕ್ಕು, ಸಂತೋಷ್, ಹಾಗೂ ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0