ವಿರಾಜಪೇಟೆ;ಕೆದಮುಳ್ಳೂರು ಶ್ರೀ ಭಗವತಿ ದೇವರ 15 ನೇ ವರ್ಷದ ವಾರ್ಷಿಕ ಮಹೋತ್ಸವ

Mar 27, 2026 - 20:37
 0  266
ವಿರಾಜಪೇಟೆ;ಕೆದಮುಳ್ಳೂರು ಶ್ರೀ ಭಗವತಿ ದೇವರ 15 ನೇ ವರ್ಷದ ವಾರ್ಷಿಕ ಮಹೋತ್ಸವ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಶ್ರೀ ಭಗವತಿ ದೇವರ 15 ನೇ ವರ್ಷದ ವಾರ್ಷಿಕ ಮಹೋತ್ಸವ ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಉತ್ಸವದ ಪ್ರಯುಕ್ತ ಬೆಳಿಗ್ಗೆಯಿಂದಲೇ ವಿಶೆಷ ಪೂಜಾ ಪುನಸ್ಕಾರಗಳು, ಗಣಪತಿ ಹೋಮ, ಭಗವತಿ ದೇವರಿಗೆ ಪೂಜೆ, ಕಲಶಾಭಿಷೇಕ ನಡೆದು ಮದ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಬಳಿಕ ಬೆಲಿಕಲ್ಲು ಪೂಜೆ ಹಾಗೂ ದೇವರ ನೃತ್ಯ ಬಲಿ ಪ್ರದಕ್ಷಿಣೆ ನಡೆಯಿತು. ಪೂಜಾ ಕೈಂಕರ್ಯಗಳನ್ನು ಬೈತೂರಿನ ತಂತ್ರಿಗಳಾದ ಶ್ರೀ ರಾಜನ್ ನಂಬೂದರಿಪಾಡ್ ಮತ್ತು ಭಗವತಿ ದೇವಸ್ಥಾನದ ಅರ್ಚಕರಾದ ರಾಧಾಕೃಷ್ಣ ಅವರು ನೆರವೇರಿಸಿದರು. ವಾರ್ಷಿಕೋತ್ಸವಕ್ಕೆ ಆಗಮಿಸಿದ ಸರ್ವ ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0