ವಿರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳ ಆಯ್ಕೆ;ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನೇಮಕ

Apr 9, 2026 - 23:38
 0  177
ವಿರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳ ಆಯ್ಕೆ;ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನೇಮಕ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ವಿರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ನೂತನ ಅಧ್ಯಕ್ಷರಾಗಿ ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯರ್ ನೇಮಕವಾಗಿದ್ದಾರೆ.

ಗೋಣಿಕೊಪ್ಪಲುವಿನ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ವಿರಾಜಪೇಟೆ ಜಂಇಯ್ಯತುಲ್ ಮುಅಲ್ಲಿಮಿನ್ ಮುಫದ್ದಿಸ್ ಅನ್ವರ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು.

 ಉಪಾಧ್ಯಕ್ಷರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಎಂ.ಸಿ.ಅಶ್ರಫ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಫೈಝಿ,ಜೊತೆ ಕಾರ್ಯದರ್ಶಿಗಳಾಗಿ ಶುಹೈಬ್ ಫೈಝಿ,ಅಬ್ದುಲ್ ಮಜೀದ್ ಬಾಖವಿ,ಕೋಶಾಧಿಕಾರಿಯಾಗಿ ಅಬ್ದುಲ್ ಗನಿ ಮದನಿ, ಪರೀಕ್ಷಾ ಬೋರ್ಡ್ ಚೇರ್ಮೆನ್ಆಗಿ ಪಿ.ಅಬ್ದುಲ್ಲಾ ಮುಸ್ಲಿಯಾರ್,ಡೆಪ್ಯೂಟಿ ಚೇರ್ಮನ್ ರಾಗಿ ಅಬ್ದುಲ್ ರಶೀದ್ ದಾರಿಮಿ,ಎಸ್ ಕೆಎಸ್ವಿ ಬಿ ಚೇರ್ಮನ್ ರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಕನ್ವೀನರ್ ರಾಗಿ ಮುಸ್ತಫ ಫೈಝಿ, ಮುಸಾಬಖ ಚೇರ್ಮನ್ ಆಗಿ ತಂಲೀಖ್ ದಾರಿಮಿ, ಕನ್ವೀನರ್ ಆಗಿ ಅಬ್ದುಲ್ ಹಮೀದ್ ಫೈಝಿಯವರನ್ನು ಆಯ್ಕೆಮಾಡಲಾಯಿತು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0