ವಿರಾಜಪೇಟೆ; ಬಂದೂಕನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ ಮೂವರು ಆರೋಪಿಗಳ ಬಂಧನ
ವಿರಾಜಪೇಟೆ; ಜನವರಿ 2ರಂದು ವಿರಾಜಪೇಟೆಯ ಮೂರ್ನಾಡು ಜಂಕ್ಷನ್ ಬಳಿ ರಾತ್ರಿ 11:45 ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಂದೂಕನ್ನು ಪ್ರದರ್ಶನ ಮಾಡಿದ ಮೂವರನ್ನು ಕೋವಿ ಸಹಿತ ವಿರಾಜಪೇಟೆ ನಗರ ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: 2/1/ 2026ರಂದು ಹೆಡ್ ಕಾನ್ಸ್ಟೇಬಲ್ ಅಕ್ಷಯ್ ರವರು ವಿರಾಜಪೇಟೆ ನಗರದಲ್ಲಿ ರಾತ್ರಿ ಗಸ್ತು ತಿರುಗಾಡುತ್ತಿದ್ದ ಸಮಯ 11:45 ಗಂಟೆಗೆ ವೇಳೆಯಲ್ಲಿ ಅಕ್ಷಯ್ ರವರಿಗೆ ಬಾತ್ಮಿದಾರರು ಕರೆ ಮಾಡಿ ಮೂರ್ನಾಡು ಜಂಕ್ಷನ್ ನಲ್ಲಿ K A 12 C 1331 ರಾ ಆಟೋ ರಿಕ್ಷದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕನ್ನು ಹೊರಗೆ ಕಾಣುವಂತೆ ಹಿಡಿದುಕೊಂಡು ಕುಳಿತುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಕೂಡಲೇ ಅಕ್ಷಯ್ ಮೂರ್ನಾಡು ಜಂಕ್ಷನ್ ಗೆ ಹೋಗಿ ನೋಡಿದಾಗ ಬಾರ್ ಮುಂಭಾಗದಲ್ಲಿ ಆಟೋರಿಕ್ಷಾ ಒಂದು ನಿಲ್ಲಿಸಿಕೊಂಡಿದ್ದು ಆಟೋರಿಕ್ಷದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕುನೊಂದಿಗೆ ಇದ್ದು ನಂತರ ಇಬ್ಬರನ್ನು ವಶಕ್ಕೆ ಪಡೆದು ನೀಡಿದ ದೂರಿನ ಮೇಲೆ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಸಂಖ್ಯೆ 1/2023 ಕಾಲಂ 270 ಬಿಎನ್ಎಸ್ 2026 ಮತ್ತು ಕಾಲಂ 3,25, 27, ಇಂಡಿಯನ್ ಆರ್ಮ್ಸ್ ರೀತಿ ಪ್ರಕರಣ ದಾಖಲಾಗಿದೆ.
ಕುಡಿದ ಅಮಲಿನಲ್ಲಿ ಬಂದೂಕನ್ನು ತೆಗೆದುಕೊಂಡು ರಾತ್ರಿ ಸಮಯದಲ್ಲೇ ಆಟೋ ರಿಕ್ಷಾದಲ್ಲಿ ಸುತ್ತಾಡುತ್ತಿದ್ದ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ವಿವರ: . ಯೋಗೀಶ್ ಎ.ಆರ್ ತಂದೆ ಲೇಟ್ ರುದ್ರಪ್ಪ ಪ್ರಾಯ 23 ವರ್ಷ ವಾಸ ಬಾಳೆಗುಂಡು ಕೆರೆತಟ್ಟು ಪೈಸಾರಿ ಮರಂದೋಡು ಗ್ರಾಮ , ಜಯ ಪಿ.ಎಂ ತಂದೆ ಮುತ್ತಪ್ಪನ್ ಪ್ರಾಯ 38 ವರ್ಷ ಆಟೋ ಡ್ರೈವರ್ ವಾಸ ಕಕ್ಕಟ್ಟೆ ನಾಪೋಕ್ಲು ಹೋಬಳಿ, ಮಡಿಕೇರಿ ತಾಲೂಕು ,ಸೋಮಣ್ಣ ಎಮ್ ತಂದೆ ಮಂದಣ್ಣ ಪ್ರಾಯ 33 ವರ್ಷ ವಾಸ ಕೊಳಕೇರಿ ಗ್ರಾಮ ನಾಪೋಕ್ಲು ಹೋಬಳಿ
What's Your Reaction?
Like
1
Dislike
0
Love
1
Funny
0
Angry
1
Sad
2
Wow
1
