ವಿರಾಜಪೇಟೆ:ಆಲೂಗಡ್ಡೆ ಚೀಲಗಳನ್ನು ತುಂಬಿ,ಅಕ್ರಮ ಗೋ ಸಾಗಾಟ;ಕೇರಳ ರಾಜ್ಯದ ಇಬ್ಬರ ಬಂಧನ

Dec 20, 2025 - 21:08
 0  1.5k
ವಿರಾಜಪೇಟೆ:ಆಲೂಗಡ್ಡೆ ಚೀಲಗಳನ್ನು ತುಂಬಿ,ಅಕ್ರಮ ಗೋ ಸಾಗಾಟ;ಕೇರಳ ರಾಜ್ಯದ ಇಬ್ಬರ ಬಂಧನ

ವಿರಾಜಪೇಟೆ: ಗೋವುಗಳ‌ ಸಾಕಾಣಿಕೆಗಾಗಿ ಖರೀದಿಸಿ ಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಈರ್ವರನ್ನು ಬಂಧಿಸಿದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ಕೇರಳ ರಾಜ್ಯದ ಕಣ್ಣೂರಿನ ತಳಿಪರಂಬು ನಿವಾಸಿಗಳಾದ ಸಾಧಿಕ್ ಪಿ.ಪಿ. (38) ಮತ್ತು ಅಬ್ದುಲ್ ಅಹಮ್ಮದ್ ( 34) ವರ್ಷ ಬಂಧಿತ ಆರೋಪಿಗಳು.

ಘಟನೆ ವಿವರ:

ಬಂಧಿತ ಆರೋಪಿಗಳು ತಳಿಪರಂಬವುನಿಂದ ತಮ್ಮ ಮಜ್ದಾ ಈಚರ್ ಲಾರಿ ಸಂಖ್ಯೆ ಕೆಎಲ್-78 ಡಿ- 5870 ರಲ್ಲಿ ಮಾಕುಟ್ಟ ಮಾರ್ಗವಾಗಿ ಮೈಸೂರು ಜಿಲ್ಲೆ ಪಿರಿಯಪಟ್ಟಣ ತಲುಪಿದ್ದರು. ಪಿರಿಯಪಟ್ಟಣ ನಗರ ವಾಸಿಯೋರ್ವನ ಸಹಾಯದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಧನ, ಕರುಗಳನ್ನು ಖರೀದಿ ಮಾಡಿದ್ದರು, ನಂತರ ರಾತ್ರಿ ವೇಳೆ ಸುಮಾರು 12.10 ಕ್ಕೆ ರಾಸುಗಳನ್ನು ತುಂಬಿಸಿಕೊಂಡು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಆಲೂಗಡ್ಡೆ ಮೂಟೆಗಳನ್ನು ತುಂಬಿದ್ದರು. ಗೋವುಗಳ ಹೊತ್ತ ಲಾರಿ ಸ್ಥಳದಿಂದ ತೆರಳುತಿದ್ದಂತೆ ಗೋರಕ್ಷರು, ವಿರಾಜಪೇಟೆ ನಗರದ ಗೋರಕ್ಷರಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ.

 ಅಲ್ಲದೆ ಲಾರಿ ಸಂಖ್ಯೆ ನಿಖರ ಮಾಹಿತಿಗಳನ್ನು ನೀಡಿದ್ದರು. ದೂರವಾಣಿ ಕರೆಯಂತೆ ಸ್ಥಳೀಯ ಗೋರಕ್ಷರು ಕರೆಯನ್ನು ಆಧರಿಸಿ ಪೆರುಂಬಾಡಿ ಪೊಲೀಸು ತಪಾಸಣೆ ಕೇಂದ್ರದ ಬಳಿ ಲಾರಿಯ ಬರುವಿಕೆಗಾಗಿ ಕಾಯುತ್ತಿದ್ದರು. ಸುಮಾರು ಮುಂಜಾನೆ 3-15 ಕ್ಕೆ ಗೋವುಗಳನ್ನು ಹೊತ್ತ ಲಾರಿ ತಪಾಸಣೆ ಕೇಂದ್ರದ ಬಳಿ ಬಂದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬಿಡುವಿಲ್ಲದ ವಾಹನ ಸಂಚಾರ ಅಧಿಕವಾಗಿತ್ತು. ತಪಾಸಣೆ ಕೇಂದ್ರದ ಪೊಲೀಸ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಲಾರಿ ಸಂಖ್ಯೆ ಆಧಾರಿಸಿ ತಪಾಸಣೆಗಾಗಿ ನಿಲ್ಲಿಸಿದ್ದಾರೆ.

ಈ ವೇಳೆ ಗೋರಕ್ಷರು ಲಾರಿ ಪರಿಶೀಲನೆಗೆ ಮುಂದಾಗಿದ್ದಾರೆ. ಲಾರಿ ತಪಾಸಣೆ ಸಂದರ್ಭ ಧನ ಕರುಗಳು ಪತ್ತೆಯಾಗಿದೆ. ಗೋರಕ್ಷರ ಮನವಿಯ ಮೇರೆಗೆ ಪೊಲೀಸು ಸಿಬ್ಬಂದಿಗಳು ಲಾರಿ ತಪಾಸಣೆ ಮಾಡಿದ್ದಾರೆ. ಸುಮಾರು 10 ಧನ ಕರುಗಳು ಪತ್ತೆಯಾಗಿದೆ. ನಂತರ ವಿರಾಜಪೇಟೆ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿರಾಜಪೇಟೆ ನಗರ ಠಾಣಾಧಿಕಾರಿಗಳಾದ ಪ್ರಮೋದ್ ಮತ್ತು ಸಿಬ್ಬಂದಿಗಳು ಬಳಿಕ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ರಾಜ್ಯ ಗೋ ಹತ್ಯೆ ನಿಷೇದ ಕಾಯ್ದೆ ಆನ್ವಯ ಪ್ರಕರಣ ದಾಖಲಾಗಿದೆ. ವಶಕ್ಕೆ ಪಡೆದಿರುವ ಗೋವುಗಳನ್ನು ಪಿಂಜರ್ ಪೋಲ್ ಗೆ ರವಾನೆ ಮಾಡಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾನುವರುಗಳ ರಕ್ಷಣೆ ಸಂಧರ್ಭಲ್ಲಿ ಗೋರಕ್ಷಕರಾದ ರಾಜೇಶ್, ಧನು ವಿವೇಕ್ ರೈ, ಇದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 3