Kodagu

ಡಿ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಮುಂಬಡ್ತಿ

admincoorgdaily

ಡಿ.ಸಿ.ಎಫ್ ಆಗಿ  ವಾಟೇರಿರ ಕಾರ್ಯಪ್ಪ ಮುಂಬಡ್ತಿ

ಮಡಿಕೇರಿ; ವನ್ಯಜೀವಿ ವಿಭಾಗದಲ್ಲಿ ಎ.ಸಿ.ಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಾಟೇರಿರ ಕಾರ್ಯಪ್ಪ ನವರಿಗೆ ಸರ್ಕಾರ ಡಿ.ಸಿ.ಎಫ್ ಆಗಿ ಪದೋನ್ನತಿ ನೀಡಿ ಆನೆ ಕಾರ್ಯಪಡೆ ಕೊಡಗು ಜಿಲ್ಲೆ.ಇಲ್ಲಿಗೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿದೆ. ಮೂಲತ ಮಡಿಕೇರಿ ನಿವಾಸಿಯಾದ ವಾಟೇರಿರ ಕಾರ್ಯಪ್ಪ ನವರು ಜಿಲ್ಲೆಯಿಂದ ಹೊರಗೆ ಬಹುಪಾಲು ಕರ್ತವ್ಯ ನಿರ್ವಹಿಸಿದ್ದರು.

ದಕ್ಷ ಅರಣ್ಯ ಅಧಿಕಾರಿಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಇವರನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು 2024 ರಲ್ಲಿ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಕೂಡ ಶಿಪಾರಸ್ಸು ಮಾಡಿದ್ದರು. ಅದರಂತೆ ಮಡಿಕೇರಿ ವನ್ಯ ಜೀವಿ ವಿಭಾಗ ಮುಖ್ಯಸ್ಥರಾಗಿ ನೇಮಕಗೊಂಡರು.

 ಇವರು ಅಧಿಕಾರ ವಹಿಸಿಕೊಂಡ ಮೇಲೆ ತಲಕಾವೇರಿ ವನ್ಯಜೀವಿ ವಿಭಾಗದಲ್ಲಿ 2020 ರಿಂದ 2023 ರವರೆಗೆ ಕಾಮಗಾರಿ ನಡೆಸದೆಯೇ ಕೋಟ್ಯಾಂತರ ರೂ ಬಿಲ್ ಪಾವತಿಯಾಗಿದ್ದು ಬೆಳಕಿಗೆ ಬಂದಿದೆ.ಅಲ್ಲದೆ 2020 ರಿಂದ ನಿಂತುಹೋಗಿದ್ದ ಕಾಮಗಾರಿ ಟೆಂಡರ್( ಪತ್ರಿಕಾ ಜಾಹೀರಾತುಗಳೊಂದಿಗೆ) ಪ್ರಕೃಯೆಗಳನ್ನು ಕಾರ್ಯಪ್ಪನವರು ಮತ್ತೆ ಆರಂಭಿಸಿ ಅರಣ್ಯ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಿದ್ದಾರೆ.