ವಯನಾಡು:ಸುಲ್ತಾನ್ ಬತ್ತೇರಿ ಯುಡಿಎಫ್ ಅಭ್ಯರ್ಥಿ‌ ಪರ ಶಾಸಕ‌ ಎಎಸ್ ಪೊನ್ನಣ್ಣ ಪ್ರಚಾರ

Mar 28, 2026 - 21:10
 0  326
ವಯನಾಡು:ಸುಲ್ತಾನ್ ಬತ್ತೇರಿ ಯುಡಿಎಫ್ ಅಭ್ಯರ್ಥಿ‌ ಪರ ಶಾಸಕ‌ ಎಎಸ್ ಪೊನ್ನಣ್ಣ ಪ್ರಚಾರ

ವಯನಾಡು;ಕೇರಳ ವಿಧಾನಸಭಾ ಚುನಾವಣೆ - 2026ರ, ವಯನಾಡು ಕ್ಷೇತ್ರದ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪರ, ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಮತಯಾಚನೆ ಕೈಗೊಂಡರು.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಬಾಲಕೃಷ್ಣನ್ ರವರ ಪರ ಬಿರುಸಿನ ಪ್ರಚಾರ ಕೈಗೊಂಡ ಶಾಸಕರು, ಹಲವು ಕಡೆ ಚುನಾವಣಾ ಭಾಷಣ ಮಾಡಿ ಕೇರಳದಲ್ಲಿ ಯುಡಿಎಫ್ ಸರಕಾರವನ್ನು ಚುನಾಯಿಸುವುದರೊಂದಿಗೆ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಪ್ರಚಾರ ಸಂದರ್ಭದಲ್ಲಿ ಮಾನ್ಯ ಶಾಸಕರೊಂದಿಗೆ, ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಕೊಡಗಿನಿಂದ ತೆರಳಿದ ಕಾಂಗ್ರೆಸ್ ಪಕ್ಷದ ಪ್ರಮುಖರು ಸಹ ಭಾಗವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 0