ದೇವಸ್ಥಾನಕ್ಕೆ ನುಗ್ಗಿದ ಕಾಡಾನೆ; ಜೀವ ಕೈಯಲ್ಲಿ ಹಿಡಿದುಕೊಂಡ ಭಕ್ತರು

Oct 3, 2025 - 21:18
 0  637
ದೇವಸ್ಥಾನಕ್ಕೆ ನುಗ್ಗಿದ ಕಾಡಾನೆ; ಜೀವ ಕೈಯಲ್ಲಿ ಹಿಡಿದುಕೊಂಡ ಭಕ್ತರು
Photo credit: The hindu

ಕೊಯಮತ್ತೂರು: ಜಿಲ್ಲೆಯ ಪೂಂಡಿ ಗ್ರಾಮದಲ್ಲಿರುವ ಪ್ರಸಿದ್ಧ ಅರುಲ್ಮಿಗು ವೆಲ್ಲಿಂಗಿರಿ ಆಂಡವರ್ ತಿರುಕೋವಿಲ್ ದೇವಸ್ಥಾನದಲ್ಲಿ ಗುರುವಾರ ಸಂಜೆ ಅಚಾನಕ್ ಕಾಡಾನೆಯೊಂದು ಪ್ರವೇಶಿಸಿದ ಪರಿಣಾಮ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಂದಿರದ ಆವರಣವನ್ನು ದಾಟಿದ ಗಂಡಾನೆ ಆನೆ ನೇರವಾಗಿ ಅರುಲ್ಮಿಗು ವೆಲ್ಲಿಂಗಿರಿ ಆಂಡವರ್, ಅರುಲ್ಮಿಗು ಪೂಂಡಿ ವಿನಾಯಕ ಹಾಗೂ ಅರುಲ್ಮಿಗು ಮನೋನ್ಮಣಿ ಅಮ್ಮನವರ ಗರ್ಭಗುಡಿ ಇರುವ ಮಂಟಪದವರೆಗೆ ತಲುಪಿದ ಘಟನೆ ಭಕ್ತರಲ್ಲಿ ಭೀತಿಯನ್ನು ಉಂಟುಮಾಡಿತು.

 ಇದರಿಂದ ಕೆಲವರು ಗಾಬರಿಗೊಂಡು ಓಡಾಡಿದರೆ, ಇನ್ನೂ ಕೆಲವರು ದೇವಾಲಯದ ಒಳಗೆ ಸಿಲುಕಿಕೊಂಡು ಹೊರಬರಲು ಹರಸಾಹಸ ಪಡಬೇಕಾಯಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಭಕ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಬಳಿಕ ಆನೆಯನ್ನು ಕಾಡಿನತ್ತ ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳಲಾಯಿತು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0