ಸಾಯಿ ವತಿಯಿಂದ ಯೋಗ ದಿನಾಚರಣೆ

Jun 22, 2026 - 16:50
 0  123
ಸಾಯಿ ವತಿಯಿಂದ ಯೋಗ ದಿನಾಚರಣೆ

ಮಡಿಕೇರಿ: ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ)ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

 ಈ ಸಂದರ್ಭ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳಿಸುವುದರಿಂದ ಪ್ರತಿನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಬೇಕು. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ ಎಂದರು.

ಮುಖ್ಯ ಹಾಕಿ ತರಭೇತುದಾರರು ಮತ್ತು ಸಾಯಿ ತರಭೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಮಾತನಾಡಿ, ವಿಶ್ವಸಂಸ್ಥೆಯು ೨೦೧೪ರ ಡಿ.೧೧ರಂದು ಜೂ.೨೧ ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಭಾರತವು ಪ್ರಸ್ತಾಪಿಸಿದ ಈ ನಿರ್ಣಯಕ್ಕೆ ದಾಖಲೆ ಪ್ರಮಾಣದ ೧೭೫ ಸದಸ್ಯ ರಾಷ್ಟ್ರಗಳು ಸಹಪ್ರಾಯೋಜಕತ್ವ ನೀಡಿದ್ದವು. ಆರೋಗ್ಯ, ಸೌಹಾರ್ದತೆ ಮತ್ತು ಸಮಗ್ರ ಕಲ್ಯಾಣವನ್ನು ಉತ್ತೇಜಿಸುವ ಶಕ್ತಿಯುತ ಸಾಧನವಾಗಿ ಯೋಗಕ್ಕೆ ಜಾಗತಿಕ ಮಾನ್ಯತೆ ದೊರೆತಿರುವುದನ್ನು ಇದು ಪ್ರತಿಬಿಂಬಿಸುತ್ತದೆ. ದೇಶಾದ್ಯಂತ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿರುವುದು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಯೋಗದ ಮಹತ್ವವನ್ನು ಮತ್ತಷ್ಟು ಬಲಪಡಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ, ತಾಲೂಕು ಆರೋಗ್ಯಾಧಿಕಾರಿ ಡಾ.ಸನತ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ.ಎಸ್.ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಯೋಗ ತರಬೇತುದಾರರಾದ ಮಹೇಶ್ ಕುಮಾರ್, ಕೌಶಿಕ್ ಆಯುಷ್, ನೀಮಾ ಸಂಸ್ಥೆಯ ಡಾ.ರಾಜಾರಾಮ್, ಸಹಾಯಕ ಆಡಳಿತ ಅಧಿಕಾರಿ ಕೆ.ಟಿ.ಕಾವೇರಪ್ಪ ಇತರರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0