ಪಂಚರಾಜ್ಯ ಚುನಾವಣಾ ಫಲಿತಾಂಶ;ವಿರಾಜಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ

May 4, 2026 - 20:52
 0  550
ಪಂಚರಾಜ್ಯ ಚುನಾವಣಾ ಫಲಿತಾಂಶ;ವಿರಾಜಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ

ವಿರಾಜಪೇಟೆ:ದೇಶದ ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಭಾ.ಜ.ಪ ಅಭೂತಪೂರ್ವ ಯಶಸ್ಸುಗಳಿಸಿದನ್ನು ಸ್ಮರಿಸಿ ವಿರಾಜಪೇಟೆ ನಗರ ಭಾ.ಜ.ಪ ವಿಜಯೋತ್ಸವ ಆಚರಿಸಿದರು.

 ಭಾರತೀಯ ಜನತಾ ಪಕ್ಷ ವಿರಾಜಪೇಟೆ ನಗರ ಘಟಕದ ವತಿಯಿಂದ ಪಂಚ ರಾಜ್ಯದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಮತ್ತು ಪುದುಚೇರಿಯಲ್ಲಿ ಪಕ್ಷವು ಜಯಭೇರಿ ಸಾಧಿಸಿದನ್ನು ಸಿಹಿ ಹಂಚಿ ಪಟಾಕಿ ಸಿಡಿಸಿ ತನ್ನ ವಿಜಯೋತ್ಸವ ಆಚರಿಸಿಕೊಂಡಿತು.

 ಇದೇ ಸಂದರ್ಭದಲ್ಲಿ ಮಾತನಾಡಿದ ಭಾ.ಜ.ಪ ಪ್ರಮುಖರಾದ ರೀನಾ ಪ್ರಕಾಶ್ ಅವರು,ರಕ್ತಪಾತ ರಾಜಕೀಯಕ್ಕೆ ಮುಖಭಂಗವಾಗಿದೆ. ಬಂಗಾಳ ದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು, ಹಿಂದುಗಳ ನರಮೇಧ ,ಕೋಮುವಾದಕ್ಕೆ ಅಂಕಿತಬಿದ್ದಿದೆ. ಗೃಹಸಚಿವ ಅಮಿತ್ ಷಾ ಮತ್ತು ನರೇಂದ್ರ ಮೋದಿ ಅವರ ಧಕ್ಷ ಆಡಳಿತದ ಪ್ರತೀಕ ಇಂದು ಮಮತ ದೀದಿ ಆಡಳಿತ ಮಣ್ಣುಪಾಲಾಗಿದೆ. ದಾಸ್ಯ ಸಂಕುಲದಿಂದ ಮುಕ್ತಿಗೊಂಡಿದೆ. ಬಂಗಾಳದಲ್ಲಿ ಭಾ.ಜ.ಪ ಹೊಸ ಅಧ್ಯಾಯ ಬರೆಯಲಿದೆ. ವಿಜಯ ಹಿಂದೆ ಕಾರ್ಯಕರ್ತರ ಶ್ರಮ ರಾಷ್ಟ್ರ ನಾಯಕರ ಬೆಂಬಲ ಮತ್ತು ಪರಿಶ್ರಮದ ಫಲ ಇಂದು ಭಾ.ಜ.ಪ ಚುಕ್ಕಾಣಿ ಹಿಡಿದಿರುವುದಕ್ಕೆ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ, ರಾಷ್ಟ್ರದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ.ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ ಭಾ.ಜ.ಪ ಅಧಿಕಾರದ ಚುಕ್ಕಾಣಿ ಹಿಡಿದು ಎನ್.ಡಿ.ಎ ಮೈತ್ರಿ ಪಕ್ಷ ಪುದುಚೇರಿ ಯಲ್ಲಿ ಮತ್ತು ಜಯ ಸಾಧಿಸಿರುವುದು ಅಮೋಘ. ಬಂಗಾಳದಲ್ಲಿ ಸುಮಾರು 80 ಲಕ್ಷ ಕಳ್ಳ ಓಟು ಮಾಡುವ ಮೂಲಕ ದೀದಿಯ ಪರಾಮಾಧಿಕರ ಸ್ಥಾಪಿಸಿದರು.

ರೋಹಿಂಗ್ಯಾ ನುಸುಳುಕೊರರಿಗೆ ಮಣೆಹಾಕಿ ಕೋಮು ಗಲಭೆ ಸೃಷ್ಟಿ ಮಾಡಲಾಗಿತ್ತು. ಹಿಂದೂಗಳಿಗೆ ಬದುಕಲು ಅಸಾಧ್ಯವಾದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಇದಕ್ಕೆ ತಕ್ಕ ಉತ್ತರ ಇಂದು ಲಭಿಸಿದೆ. ದೀದಿಯ ರಾಜಕಾರಣ ಮುಕ್ತಾಯ ಕಂಡಿದೆ. ಇದು ಕಾರ್ಯಕರ್ತರ ಶ್ರಮಕ್ಕೆ ಸಂಧ ಗೆಲುವು ಎಂದು ಹೇಳಿದರು.

ವಿಜಯೋತ್ಸವ ಸಂದರ್ಭದಲ್ಲಿ ವಿರಾಜಪೇಟೆ ಮಂಡಲ ಅದ್ಯಕ್ಷ ಸುವೀನ್ ಗಣಪತಿ, ನಗರ ಅದ್ಯಕ್ಷ ಅನೀಲ್ ಮಂದಣ್ಣ, ಸಚೀನ್ ಕೂತಂಡ, ಪಟ್ರಪಂಡ ರಘು ನಾಣಯ್ಯ, ಪ್ರದೀಪ್ ರೈ, ಸುಮೇಶ್, ಸುರೇಶ್ ಟಿ.ಸಿ. ಅಚ್ಚಪಂಡ ಮಹೇಶ್ ಗಣಪತಿ, ಉನ್ನಿ ಹಾಗೂ ಪಕ್ಷದ ಪ್ರಮುಖ ರು ಕಾರ್ಯಕರ್ತರು ವಿಜಯೋತ್ಸವ ದಲ್ಲಿ ಹಾಜರಿದ್ದರು.

 ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1