ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿದರೆ ಮಾತ್ರ ಸರಕಾರಿ ಶಾಲೆಯ ಉಳಿವು ಸಾಧ್ಯ:ಸಮಾಜ ಸೇವಕ ಹರಪಳ್ಳಿ ರವೀಂದ್ರ

ಸಿದ್ದಾಪುರ : ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿದರೆ ಮಾತ್ರ ಸರಕಾರಿ ಶಾಲೆಯ ಉಳಿವು ಸಾಧ್ಯ ಎಂದು ಸಮಾಜ ಸೇವಕ ಹರಪಳ್ಳಿ ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ನೆಲ್ಲಿಹುದಿಕೇರಿಯ ಎಂ.ಜಿ ಕಾಲೋನಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಾಹಿತಿ ತಂತ್ರಜ್ಞಾನ ಮುಂದುವರಿದಿದ್ದು ಇಂಗ್ಲೀಷ್ ಭಾಷೆ ಇಂದಿನ ಯುಗಕ್ಕೆ ಅತ್ಯವಶ್ಯಕವಾಗಿರುವ ಹಿನ್ನಲೆಯಲ್ಲಿ ಸರಕಾರಿ ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಪ್ರಾಮುಖ್ಯತೆ ನೀಡಬೇಕು.ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರು ಕೂಡ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ರಸಾದ್ ಕುಟ್ಟಪ್ಪ ಮಾತನಾಡಿ ಸ್ವಂತಕ್ಕಾಗಿ ಸಂಪಾದನೆ ಮಾಡಲು ಮುಂದಾಗುತ್ತಿರುವ ಈ ಯುಗದಲ್ಲಿ ಸಮಾಜಕ್ಕಾಗಿ ತಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಡುತ್ತಿರುವ ಹರಪಳ್ಳಿ ರವೀಂದ್ರರವರ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಸಮಾಜ ಸೇವಕರಾದ ಅಜ್ವಲ್ ರವೀಂದ್ರ, ಬಸಪ್ಪ,, ಖಾಸಿಂ, ಅಜ್ಮಲ್, ಶಿಹಾಬುದ್ದಿನ್, ನೆಲ್ಯಹುದಿಕೇರಿ ಜೆಡಿಎಅ್ ಅಧ್ಯಕ್ಷ ಶಿಹಾಬುದ್ದಿನ್ ತಂಜ್ಞಳ್ ವಿಪಿಎಸ್ , ಗ್ರಾಮಸ್ಥರಾದ ಯೂನಸ್, ಮುಖ್ಯೋಪಾಧ್ಯಾಯರಾದ ಮೀನಾಕ್ಷಿ, ಶಿಕ್ಷಕಿಯರಾದ ಪುಷ್ಪವೇಣಿ,ಧನಲಕ್ಷ್ಮೀ, ಎಸ್ ಡಿಎಂಸಿ ಉಪಾಧ್ಯಕ್ಷೆ ಕಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.