ಮಲೈಮಹದೇಶ್ವರ ಹುಲಿ ಸಾವು ಪ್ರಕರಣ ಖಂಡನೀಯ:ಸಂಸದ ಯದುವೀರ್ ಒಡೆಯರ್

ಮೈಸೂರು:ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿಗಿನ ಹುಲಿಗಳ ಸಾವು ಹಾಗೂ ಕೋತಿಗಳ ಮಾರಣ ಹೋಮ ಘಟನೆಗಳು ಖಂಡನೀಯ. ಹುಲಿಗಳ ಸಂರಕ್ಷಣೆಯಾಗಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು ಹಾಗೂ ನಮ್ಮ ವನ ಸಂಪತ್ತು ಹೆಚ್ಚಿಸಬೇಕಾದ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.