ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ಮೂರನೇ ದಿನದ ಎರಡನೇ ಪಂದ್ಯ ಮಿಲನ್ಸ್ ಎಫ್.ಸಿ ತಂಡಕ್ಕೆ ಭರ್ಜರಿ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಎರಡನೇ ಪಂದ್ಯದಲ್ಲಿ ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡವು 04-02 ಗೋಲುಗಳ ಅಂತರದಿಂದ ಫಿಫಾ ಪೆರುಂಬಾಡಿ ತಂಡವನ್ನು ಮಣಿಸಿದೆ.
ಮೊದಲಾರ್ಧದಲ್ಲಿ ಎರಡು ಗೋಲುಗಳ ಅಂತರದಿಂದ ಮುನ್ನಡೆ ಪಡೆದಿದ್ದ ಪೆರುಂಬಾಡಿ ತಂಡಕ್ಕೆ ದ್ವಿತೀಯಾರ್ಧದಲ್ಲಿ ದೊಡ್ಡ ಆಘಾತ ಕಾದಿತ್ತು.ಆಕ್ರಮಣಕಾರಿ ಆಟಕ್ಕೆ ಮುಂದಾದ ಮಿಲನ್ಸ್ ತಂಡವು 4 ಗೋಲುಗಳನ್ನು ಬಾರಿಸಿ ಕಮ್ ಬ್ಯಾಕ್ ಆಗಿ ಅಮೋಘ ಪ್ರದರ್ಶನ ತೋರಿದರು.ಮಿಲನ್ಸ್ ತಂಡದ ಪರವಾಗಿ ದಿವಾಕರ್ ಎರಡು, ಪಾಂಡ್ಯ ಹಾಗೂ ಯೋಗಿತ್ ತಲಾ ಒಂದು ಗೋಲು ಬಾರಿಸಿದರು.ಫಿಫಾ ತಂಡದ ಪರವಾಗಿ ರಯಾನ್ ಹಾಗೂ ಜಾಕಿ ತಲಾ ಒಂದು ಗೋಲು ಗಳಿಸಿದರು.ಮಿಲನ್ಸ್ ತಂಡದ ಪಾಂಡ್ಯನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
What's Your Reaction?






