ಬೈರಂಬಾಡ: ರಸ್ತೆಯಲ್ಲಿ ಗಜಪಡೆಗಳ ಸಂಚಾರ

ಬೈರಂಬಾಡ: ರಸ್ತೆಯಲ್ಲಿ ಗಜಪಡೆಗಳ ಸಂಚಾರ

ಸಿದ್ದಾಪುರ:-ಅಮ್ಮತ್ತಿ ಸಮೀಪದ ಬೈರಂಬಾಡ  ಮುಖ್ಯ ರಸ್ತೆಯಲ್ಲೇ ಬುಧವಾರ ಸಂಜೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಬೈರಂಬಾಡ ಗ್ರಾಮದ ಸುತ್ತಮುತ್ತ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರು ಕೂಡ,ಕಾಡಾನೆಗಳು ಕೆಲವೇ ದಿನಗಳಲ್ಲಿ ಮರಳಿ ತೋಟಕ್ಕೆ ಲಗ್ಗೆ ಇಡುತ್ತಿವೆ.ಕಾಡಾನೆಗಳ ಹಿಂಡು ಮುಖ್ಯ ರಸ್ತೆಯ ಮೂಲಕ ನಡೆದು, ಬಳಿಕ ಕಾಫಿ ತೋಟಕ್ಕೆ ತೆರಳಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .