ವಿರಾಜಪೇಟೆ: ದೈವಜ್ಞ ಸಮಾಜದ ನೂತನ ಕಟ್ಟಡ ಉದ್ಘಾಟಿಸಿದ ಎ.ಎಸ್ ಪೊನ್ನಣ್ಣ
ವಿರಾಜಪೇಟೆ: ನೂತನವಾಗಿ ನಿರ್ಮಾಣಗೊಂಡ ದೈವಜ್ಞ ಸಮಾಜದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿ ಪೊನ್ನಣ್ಣನವರು ಭಾಗವಹಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು, ದೈವಜ್ಞ ಸಮಾಜದವರ ಕೊಡುಗೆ ಈ ನಾಡಿಗೆ ಅಪಾರವಾದದ್ದು. ನಾಡಿನ ಎಲ್ಲಾ ಪ್ರಮುಖ ಕಾರ್ಯಗಳಲ್ಲಿ ದೈವಜ್ಞ ಸಮಾಜದ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಮಾಜದ ಏಳಿಗೆಗಾಗಿ ತನ್ನ ಕೈಲಾದ ಎಲ್ಲಾ ಸಹಾಯ ಮಾಡಲು ತಾನು ಸಿದ್ಧ ಇರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಮಾಚಯ್ಯ, ದೈವಜ್ಞ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.