ವಿರಾಜಪೇಟೆ: ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದ ವಿರಾಜಪೇಟೆ ವಕೀಲ ಸಂಘ

ವಿರಾಜಪೇಟೆ: ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದ ವಿರಾಜಪೇಟೆ ವಕೀಲ ಸಂಘ
ವಿರಾಜಪೇಟೆ: ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದ ವಿರಾಜಪೇಟೆ ವಕೀಲ ಸಂಘ
ವಿರಾಜಪೇಟೆ: ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದ ವಿರಾಜಪೇಟೆ ವಕೀಲ ಸಂಘ

ವಿರಾಪಜಪೇಟೆ: ವಿರಾಜಪೇಟೆ ನಗರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ, ನೂತನ ನ್ಯಾಯಾಧಿಶೀರು ಸೋಮವಾರ ಅಧಿಕಾರ ಸ್ವೀಕರಿಸಿದರು. ನ್ಯಾಯಾಧೀಶರಿಗೆ ವಿರಾಜಪೇಟೆ ವಕೀಲರ ಸಂಘದಿಂದ ಭವ್ಯ ಸ್ವಾಗತ ಕೋರಲಾಯಿತು.

ವಕೀಲರ ಸಂಘ ವಿರಾಜಪೇಟೆ ವತಿಯಿಂದ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ನೂತನ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ ನಗರದ 2 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ನ್ಯಾಯಾಧೀಶರಾದ ಶ್ರೀಮತಿ ಎಸ್. ಸುಜಾತ ಅವರು ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತಿದ್ದ ಶ್ರೀ ನಟರಾಜ್ ಅವರು 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ವಿರಾಜಪೇಟೆ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿ,ಮಾತನಾಡಿದರು.

 ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳಲ್ಲಿ ಹೊಂದಾಣಿಕೆ ಇರಬೇಕು. ನ್ಯಾಯದ ಪರವಾಗಿ ಕರ್ತವ್ಯ ನಿರ್ವಹಿಸಲು ಸರ್ವರ ಸಹಕಾರ ಅತ್ಯಗತ್ಯ. ರಾಜ್ಯದ ವಿವಿಧ ಸ್ಥಳಗಳಲ್ಲಿ ನ್ಯಾಯಾಲಯದ ಸಂಕೀರ್ಣ ಕಿರಿದಾಗಿದೆ ಇಲ್ಲಿಯೂ ಅದೇ ಬವಣೆಯಿದೆ. ಆದ್ದರಿಂದ ಬಹುಬೇಗನೆ ಸುಮಾರು 5 ರಿಂದ 10 ಎಕ್ರೆಗಳ ವರೆಗೆ ಸರ್ಕಾರಿ ಭೂಮಿ ಇದ್ದಲ್ಲಿ ತಿಳಿಸಿ. ಬಹು ಸಂಕೀರ್ಣ ಸುಸಜ್ಜಿತವಾದ ನ್ಯಾಯಾಲಯದ ಕಟ್ಟಡ ನಿರ್ಮಾಣ ಸುಗಮವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ವಿರಾಜಪೇಟೆ ಅಧ್ಯಕ್ಷರಾದ ಸಿ.ಕೆ. ಪೂವಣ್ಣ ಅವರು 1960 ರಲ್ಲಿ ಪ್ರಾರಂಭವಾದ ವಕೀಲರ ಸಂಘವು ಇಂದು 126 ಮಂದಿ ಸದಸ್ಯ ಬಲವನ್ನು ಹೊಂದಿದೆ. ಕೊಡಗು ಜಿಲ್ಲೆ ಬೆಟ್ಟ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಕಾಡಾನೆ ಮತ್ತು ವನ್ಯಮೃಗಗಳ ಹಾವಳಿ ಹೆಚ್ಚಾಗಿದೆ. ಕಲಾಪಗಳ ಅವಧಿಯಲ್ಲಿ ಸಮಯಾವಕಾಶ ನೀಡಿ ನ್ಯಾಯಾವಾದಿಗಳಿಗೆ ಬೇಗನೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಾಧೀಶರಿಗೆ ವಿರಾಜಪೇಟೆ ವಕೀಲರ ಸಂಘ ಸರ್ವ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ನೂತನವಾಗಿ ಆಧಿಕಾರ ಸ್ವೀಕರಿಸಿದ ನ್ಯಾಯಾಧೀಶರಿಗೆ ವಕೀಲರ ಸಂಘದ ವತಿಯಿಂದ ಕಿರು ಹೊತ್ತಿಗೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮಂಜುನಾಥ್, ಸರ್ಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರುಗಳು ಉಪಸ್ಥಿತರಿದ್ದರು.ವಕೀಲರ ಸಂಘ ವಿರಾಜಪೇಟೆ ಕಾರ್ಯದರ್ಶಿ ಪ್ರಶಾಂತ್ ಅವರು ಸರ್ವರನ್ನು ಸ್ವಾಗತಿಸಿದರು.ವಕೀಲೆ ಶ್ರೀಮತಿ ಗೀತಾ ನಿರೂಪಿಸಿದರು. ವಕೀಲೆ ಅನುಪಮ ಕಿಶೋರ್ ವಂದಿಸಿದರು.ಕಾರ್ಯಕ್ರಮದಲ್ಲಿ ಬಾರ್ ಅಸೋಸಿಯೇಷನ್ ವಿರಾಜಪೇಟೆ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು, ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು. 

ವರದಿ: ಕಿಶೋರ್ ಕುಮಾರ್ ಶೆಟ್ಟಿ